ದಾಂಪತ್ಯ ಕಲಹ: ವಿಚ್ಚೇದನದ ತೀರ್ಪು ಬರುವ ಮುನ್ನವೇ ಪತಿ ನೇಣಿಗೆ ಶರಣು

ಹೊಸದಿಗಂತ ವರದಿ, ಮದ್ದೂರು :

ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ವಿಚ್ಚೇದನದ ತೀರ್ಪು ಬರುವ ಮುನ್ನವೇ ಜಿಗುಪ್ಸೆಗೊಂಡ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ಶನಿವಾರ ರಾತ್ರಿ ಜರುಗಿದೆ.
ಗ್ರಾಮದ ಮಲ್ಲೇಶ್ ಎಂಬುವರ ಪುತ್ರ ಸಿ.ಎಂ. ಅಭಿಷೇಕ್ (24) ಆತ್ಮಹತ್ಯೆಗೆ ಶರಣಾದ ಯುವಕ. ಶನಿವಾರ ರಾತ್ರಿ ಗ್ರಾಮದ ಸಮೀಪದ ಚನ್ನಸಂದ್ರ ಹಾಗೂ ಉಪ್ಪಿನಕೆರೆ ಮಾರ್ಗದ ಕಾಲುವೆ ರಸ್ತೆಯ ತೋಟವೊಂದರಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಂದೆ ಮಲ್ಲೇಶ್ ದೂರು ನೀಡಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿ.ಎಂ. ಅಭಿಷೇಕ್ ಮದ್ದೂರು ತಾಲೂಕಿನ ಕೆ. ಕೋಡಿಹಳ್ಳಿಯ ಕಳೆದ ಎರಡು ವರ್ಷಗಳ ಹಿಂದೆ ಅರ್ಪಿತಾ ಎಂಬುವವಳೊಂದಿಗೆ ವಿವಾಹವಾಗಿದ್ದ. ದಂಪತಿಗಳ ನಡುವೆ ಕಳೆದ ಕೆಲ ತಿಂಗಳುಗಳಿಂದ ವೈಮನಸ್ಸು ಉಂಟಾದ ಕಾರಣ ಅಭಿಷೇಕ್ ಹಾಗೂ ಅರ್ಪಿತಾ ಕುಟುಂಬದವರು ಮಾತುಕತೆ ನಡೆಸಿ ವಿಚ್ಚೇದನ ನೀಡಲು ತೀರ್ಮಾನಿಸಿದ್ದರು.
ಮದ್ದೂರು ಜೆಎಂಎ್ಸಿ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ಹಲವು ಬಾರಿ ದಂಪತಿಗಳ ನಡುವಿನ ಅರ್ಜಿ ಕುರಿತಂತೆ ವಿಚಾರಣೆ ನಡೆದಿತ್ತು. ಪತಿ ಅಭಿಷೇಕ್ ಕಡೆಯವರಿಂದ ಅರ್ಪಿತಾಳಿಗೆ ಆರ್ಥಿಕ ಪರಿಹಾರದೊಂದಿಗೆ ವಿಚ್ಚೇದನದ ತೀರ್ಪು ಹೊರಬೀಳುವ ಹಂತದಲ್ಲಿತ್ತು. ಈ ಮಧ್ಯೆ ಅಭಿಷೇಕ್ ವಿಚ್ಚೇದನದ ಅರ್ಜಿ ವಿಚಾರಣೆ ಸಂಬಂಧ ಕಳೆದ ಜೂ. 17ರಂದು ನ್ಯಾಯಾಲಯಕ್ಕೆ ಹಾಜರಾದ ನಂತರ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ ನಂತರ ನಾಪತ್ತೆಯಾಗಿದ್ದ. ಈತನ ಬಗ್ಗೆ ಪೋಷಕರು ಹುಡುಕಾಟ ನಡೆಸಿದ್ದರೂ ಸಹ ಸುಳಿವು ದೊರೆತಿರಲಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತುಘಿ.
ಶನಿವಾರ ರಾತ್ರಿ ಅಭಿಷೇಕ್ ತಮ್ಮ ಗ್ರಾಮ ಸಮೀಪದ ತೋಟವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!