ಅತ್ತ ಹರತಾಳಕ್ಕೆ ಕರೆ, ಇತ್ತ ಪೊಲೀಸರ ಸುತ್ತೋಲೆ: ಕೇರಳದಲ್ಲಿ ಜನತೆ ಕಂಗಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಕತಾಳೀಯವೋ ಎಂಬಂತೆ ಒಂದೆಡೆ ಅಗ್ನಿಪತ್ ವಿರೋಧಿಸಿ ಕೆಲವು ಸಂಘಟನೆಗಳು ಕೇರಳದಲ್ಲಿ ನೀಡಿರುವ ‘ಹರತಾಳದ ಕರೆ’, ಇನ್ನೊಂದೆಡೆ ಪೊಲೀಸ್ ಇಲಾಖೆ ಸುತ್ತೋಲೆ ಸೋಮವಾರ ಈ ಎರಡು ಬೆಳವಣಿಗೆಗಳು ನಾಗರಿಕರನ್ನು ಅಕ್ಷರಶಃ ಹೈರಾಣಾಗಿತು!
ಸೋಮವಾರ ಕೇರಳದಲ್ಲಿ ಹರತಾಳಕ್ಕೆ ಕೆಲವು ಸಂಘಟನೆಗಳು ಕರೆ ನೀಡಿವೆ ಎಂಬ ವದಂತಿ ಸಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದರೆ, ಹಿಂಸಾತ್ಮಕ ಮೆರವಣಿಗೆ, ಬಲವಂತವಾಗಿ ವ್ಯಾಪಾರವನ್ನು ಮುಚ್ಚುವುದು ಮಾಡಿದಲ್ಲಿ ಅಂತವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂಬ  ರಾಜ್ಯ ಪೊಲೀಸ್ ಮಾಧ್ಯಮ ಸೆಲ್ ಹೊರಡಿಸಿರುವ ಸುತ್ತೋಲೆ ಜನತೆಯಲ್ಲಿ ಆತಂಕ ಮೂಡಿಸಿತ್ತು. ಆದರೆ ಅತ್ತ ರಾಜ್ಯದಲ್ಲಿ ಯಾವುದೇ ಸಂಘಟನೆಗಳು ಹರತಾಳಕ್ಕೆ ಕರೆ ನೀಡಿಲ್ಲ, ಇತ್ತ ಪೊಲೀಸ್ ಇಲಾಖೆಯ ಸುತ್ತೋಲೆಗೂ ಹರತಾಳಕ್ಕೂ ಸಂಬಂಧವೇ ಇಲ್ಲ ಎಂಬುದು ಅರಿವಾಗುತ್ತಿದ್ದಂತೆಯೇ ನಾಗರಿಕರು ನಿರಾಳರಾದರು. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಲಾಗುತ್ತಿರುವ ಅಪಪ್ರಚಾರದ ವಿರುದ್ಧ ಪೊಲೀಸರು ಗರಂ ಆಗಿದ್ದು, ಸೂಕ್ತ ಕ್ರಮಕ್ಕೆ ಮುಂದಾಗುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!