ವಿಮಾನಕ್ಕೆ ಬೆಂಕಿಬಿದ್ದರೂ ಎದೆಗುಂದದ ಗಟ್ಟಿಗಿತ್ತಿಗೆ social media ಉಘೇ ಉಘೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಟ್ನಾದಲ್ಲಿ ಭಾನುವಾರ ತಾನು ಚಲಾಯಿಸುತ್ತಿರುವ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಬೆಂಕಿಗೀಡಾದರೂ ಎದೆಗುಂದದೆ ಮಿಂಚಿನ ವೇಗದಲ್ಲಿ ಮತ್ತೆ ತುರ್ತು ಭೂಸ್ಪರ್ಷಗೊಳಿಸಿ ಬರೋಬ್ಬರಿ 185 ಪ್ರಯಾಣಿಕರನ್ನು ಜೀವಾಪಾಯದಿಂದ ರಕ್ಷಿಸಿದ ಸ್ಪೈಸ್ ಜೆಟ್ ಪೈಲಟ್‌ಗೆ ಅಭಿನಂದನೆಗಳ ಮಾಹಾಪೂರವೇ ಹರಿದುಬರುತ್ತಿದೆ!
ಸ್ಲೈಸ್ ಜೆಟ್‌ನ ಬೋಯಿಂಗ್ 737 ಪೈಲಟ್ ಕ್ಯಾಪ್ಟನ್ ಮೋನಿಕಾ ಖನ್ನಾ  ಸಮಯಪ್ರಜ್ಞೆಗೆ ಸಮಾಜಿಕ ಜಾಲತಾಣಗಳೂ ಉಘೇ ಉಘೇ ಎನ್ನುತ್ತಿವೆ.
ಪಾಟ್ನಾದಿಂದ ದೆಹಲಿಗೆ ಹಾರಿದ್ದ ಈ ವಿಮಾನದ ಎಂಜಿನ್‌ನಲ್ಲಿ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಪೈಲಟ್ ಮೋನಿಕಾ ರ ಗಮನಕ್ಕೆ ಬಂದಿತ್ತು. ಇದನ್ನು ಕಂಡೂ ಗಲಿಬಿಲಿಗೊಳ್ಳದ ಅವರು, ವಿಮಾನವನ್ನು ತಕ್ಷಣವೇ ಮರಳಿ ಪಾಟ್ನಾ ಏರ್ ಪೋರ್ಟ್‌ಗೆ ತಂದು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಪೈಲಟ್ ಮೋನಿಕಾ ಖನ್ನಾರ ಸಮಯ ಪ್ರಜ್ಞೆಯನ್ನು ಸಾರ್ವಜನಿಕರು ಮತ್ತು ಅಧಿಕಾರಿಗಳು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಮೊನಿಕಾ ಖನ್ನಾ ಎಂದು ಪೋಸ್ಟ್ ಹಾಕಿ ಪ್ರಶಂಸಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!