ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ನಡೆದ ವಿಶ್ವ ಯೋಗದಿನಾಚರಣೆ ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಯಿತು.
ಬೆಳಗ್ಗೆ 6.20ಕ್ಕೆ ರಾಡಿಸನ್ ಬ್ಲ್ಯೂ ಹೊಟೇಲ್ನಿಂದ ಹೊರಟ ಮೋದಿ ಬಳಿಕ 6.30ಕ್ಕೆ ಅರಮನೆ ಆವರಣಕ್ಕೆ ತಲುಪಿ, ೮ನೇ ವಿಶ್ವ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ತಮ್ಮ ಭಾರೀ ಬಿಗಿ ಭದ್ರತೆಯ ನಡುವೆಯೂ ದಿಢೀರನೇ ವೇದಿಕೆಯಿಂದ ಇಳಿದು ಬಂದರಲ್ಲದೆ, ನೇರ ಸಾರ್ವಜನಿಕರೊಂದಿಗೆ ಬೆರೆತು ಅವರೊಂದಿಗೇ ಸೇರಿ ಯೋಗ ಮಾಡುವ ಮೂಲಕ ಅಚ್ಚರಿ ಮೂಡಿಸಿದರು. ಮೈಸೂರಿನಲ್ಲಿ ಇಂದು ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರಕ್ಕೂ ಅಽಕ ಮಂದಿ ಯೋಗಾಭ್ಯಾಸ ನಡೆಸಿದರು.