ಹೊಸದಿಗಂತ ವರದಿ ಹುಬ್ಬಳ್ಳಿ:
ನೂರು ವರ್ಷ ತುಂಬಲಿರುವ ಬಾಲಕರ ಹಾಸ್ಟೆಲ್ ನಲ್ಲಿ ನಡೆಯುವ ಕೂತುಹಲಕರವಾದ ವಿಭನ್ನವಾದ ಕಥೆಯ ಹಾಸ್ಯಾಸ್ಪದ ಕಥಾಹಂದರ ಒಳಗೊಂಡ ಅಬ್ಬಬ್ಬ ಕನ್ನಡ ಸಿನಿಮಾ ರಾಜ್ಯಾದ್ಯಂತ ಜು.೧ರಂದು ಬಿಡುಗಡೆಯಾಗುತ್ತಿದೆ ಎಂದು ಸಿನಿಮಾದ ನಟ ಲಿಖಿತ್ ಶೆಟ್ಟಿ ಹೇಳಿದರು.
ಸಿನಿಮಾವನ್ನು ನಿರ್ದೇಶಕ ಕೆ.ಎಂ ಚೈತನ್ಯ ಅವರು ನಿರ್ದೇಶಿಸಿದ್ದಾರೆ. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾವಾಗಿದೆ. ಮೀರಾಮಾರ್ ಸಂಸ್ಥೆಯ ಆನ್ ಆಗಸ್ಟೈನ್ ಹಾಗೂ ವಿವೇಕ ಥಾಮಸ್ ಅವರು ನಿರ್ಮಾಣ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿ ಅಮೃತ ಅಯ್ಯಂಗಾರ, ಅಜಯರಾಜ್, ತಾಂಡವರಾಮ್, ಹಾಗೂ ಧನ್ ರಾಜ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.
ಬೆಂಗಳೂರು ಮತ್ತು ತುಮಕೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇತ್ತೀಚೆಗೆ ಟ್ರೈಲರ್ ಬಿಡುಗಡೆಯಾಗಿದ್ದು, ಜನರಿಂದ ಒಳ್ಳೆಯ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಯೋಗರಾಜ ಭಟ್, ಡಾಲಿ ಧನಂಜಯ ಮತ್ತು ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ವಸಿಷ್ಠಸಿಂಹ ಅವರು ಧ್ವನಿ ನೀಡಿದ್ದಾರೆ. ದೀಪಕ ಅಲೆಕ್ಸಾಂಡರ್ ಸಂಗೀತ ನಿರ್ದೇಶನ, ಮನೋಹರ ಜೋಶಿ ಛಾಯಾಗ್ರಹಣ, ಹರಿದಾಸ ಸಂಕಲನ ಮಾಡಿದ್ದಾರೆ ಎಂದು ತಿಳಿಸಿದರು.
ನಟ ಅಜಯರಾಜ್, ತಾಂಡವರಾಯ್, ಧನ್ ರಾಜ್ ಇದ್ದರು.