ನಿತ್ಯಾ ಮೆನನ್‌ ಕಾಲಿಗೆ ಏನಾಯ್ತು..? ಇವೆಂಟ್‌ಗೆ ಕುಂಟುತ್ತಾ ಬಂದ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೈನಾ,ಕೋಟಿಗೊಬ್ಬ-2 ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದ ಮಲೆಯಾಳಿ ಕುಟ್ಟಿ ಕಾಲಿಗೆ ಪೆಟ್ಟಾಗಿದೆ. ಒಂದೆಡೆ ತೆಲುಗಿನಲ್ಲಿ ಸಿನಿಮಾ ಒಂದೆಡೆ ವೆಬ್ ಸೀರಿಸ್‌, ಇನ್ನೊಂದೆಡೆ ಜಡ್ಜ್‌ ಆಗಿ ಸಖತ್‌ ಬ್ಯುಸಿ ಆಗಿರುವ ನಿತ್ಯಾ ತಮ್ಮ ಇವೆಂಟ್‌ಗೆ ಕುಟುಂತಾ ಬಂದಿದ್ದಾರೆ. ದೈನಂದಿನ ವೆಬ್ ಸಿರೀಸ್ ‘ಮಾಡರ್ನ್ ಲವ್ ಹೈದರಾಬಾದ್’‌ ಇದೇ ಜುಲೈ 8 ರಿಂದ ಅಮೆಜಾನ್‌ನಲ್ಲಿ ಪ್ರಸಾರವಾಗಲಿದೆ.

‘ಮಾಡರ್ನ್ ಲವ್ ಹೈದರಾಬಾದ್’ ಸರಣಿಯ ಪ್ರಚಾರದ ಭಾಗವಾಗಿ ಹೈದರಾಬಾದ್‌ನಲ್ಲಿ ಸುದ್ದಿಗೋಷ್ಟಿ ನಡೆಸಲಾಯಿತು. ಇಲ್ಲಿಗೆ ನಿತ್ಯಾ ಮೆನನ್‌ ಕೂಡ ಹಾಜರಾಗಿದ್ದರು. ವೇದಿಕೆ ಮೇಲೆ ಬರುವಾಗ ಇಬ್ಬರ ಸಹಾಯದಿಂದ ಕೋಲು ಹಿಡಿದು ಕುಂಟುತ್ತಾ ಬಂದಿದ್ದಾರೆ. ಇದರಿಂದ ನಿತ್ಯಾಗೆ ಏನಾಯಿತು ಎಂದು ನೆರೆದಿದ್ದ ಎಲ್ಲರಲ್ಲೂ ಗೊಂದಲವಾಯಿತು. ಬಳಿಕ ಮಾತನಾಡಿದ ನಟಿ. ನಾನು ಈ ಸಿರೀಸ್‌ನಲ್ಲಿ ಇಂಥದ್ದೇ ಒಂದು ಪಾತ್ರ ಮಾಡಿದ್ದೇನೆ. ಆದರೆ, ಆ ಘಟನೆ ನಿಜವಾಗಿಯೂ ಸಂಭವಿಸಿದೆ. ಇತ್ತೀಚೆಗೆ ನಮ್ಮ ಮನೆಯ ಮೆಟ್ಟಿಲುಗಳಿಂದ ಜಾರಿಬಿದ್ದೆ ಎಂದು ನಡೆದ ಪ್ರಸಂಗವನ್ನು ವಿವರಿಸಿದ್ದಾರೆ.

ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ತಾವು ನಟಿಸಿದ ಸಿರೀಸ್ ಪ್ರಚಾರಗಳಲ್ಲಿ ಪಾಲ್ಗೊಂಡು ಮುತುವರ್ಜಿ ವಹಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಿತ್ಯಾ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!