ಹೊಸದಿಗಂತ ವರದಿ ಕಾಸರಗೋಡು:
ಕಾಸರಗೋಡು ಸ್ಪೆಷಲ್ ಬ್ರಾಂಚ್ ಎಎಸ್ಐ ಆಗಿದ್ದ ಅಬ್ದುಲ್ ಆಸೀಸ್ (48) ಮೃತದೇಹವು ಅವರ ವೆಳ್ಳರಿಕುಂಡು ಮನೆಯಲ್ಲಿ ಪತ್ತೆಯಾಗಿದೆ. ಸಾವಿನ ಬಗ್ಗೆ ನಿಗೂಢತೆಯಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದಲ್ಲಿ ಸಮಗ್ರ ಪೊಲೀಸ್ ತನಿಖೆ ಆರಂಭಗೊಂಡಿದೆ.
ಈ ಹಿಂದೆ ವೆಳ್ಳರಿಕುಂಡು, ರಾಜಪುರಂ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಎಎಸ್ಐ ಆಗಿ ಬಡ್ತಿಗೊಂಡು ಸ್ಪೆಷಲ್ ಬ್ರಾಂಚ್ಗೆ ವರ್ಗಾವಣೆಯಾಗಿದ್ದರು. ಮುಹಮ್ಮದ್ ಮತ್ತು ಹಲೀಮಾ ದಂಪತಿಯ ಪುತ್ರನಾದ ಅವರು ಪತ್ನಿ ಜಸೀಲಾ, ಮಕ್ಕಳಾದ ಅಖಿಲಾ, ಜವಾದ್ ಅವರನ್ನು ಅಗಲಿದ್ದಾರೆ.