Thursday, August 18, 2022

Latest Posts

ENG vs NZ: ಮೈದಾನದಲ್ಲಿ ಇತ್ತಂಡಗಳ ರೋಚಕ ಕಾದಾಟ; ಅತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿ ಡಿಶುಂ.. ಡಿಶುಂ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇಂಗ್ಲೆಂಡ್‌ ನ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನ್ಯಾಜಿಲ್ಯಾಂಡ್‌ ಹಾಗೂ ಇಂಗ್ಲೆಂಡ್‌ ನಡುವೆ ನಡೆದ ಟೆಸ್ಟ್‌ ಪಂದ್ಯ ರೋಚಕವಾಗಿತ್ತು. ಪಂದ್ಯದ ನಾಲ್ಕನೇ ದಿನ ನ್ಯೂಜಿಲ್ಯಾಂಡ್‌ ನೀಡಿದ್ದ 296 ರನ್ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ಗೆ ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್ ಆಸರೆಯಾಗಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುತ್ತಿದ್ದರು. ಅತ್ತ ನ್ಯೂಜಿಲ್ಯಾಂಡ್‌ ಗೆಲ್ಲಲು ಬೇಗನೆ ವಿಕೆಟ್‌ ಕಬಳಿಸುವ  ಅಗತ್ಯವಿದ್ದರೆ, ಇಂಗ್ಲೆಂಡ್‌ ಬ್ಯಾಟ್ಸ್‌ ಮನ್‌ ಗಳು ಕ್ರೀಸ್ ಕಚ್ಚಿ ಆಡುವುದು ಅನಿವಾರ್ಯವಾಗಿತ್ತು. ಗೆಲುವಿಗೆ ಎರಡೂ ತಂಡಗಳು ಸಮಬಲದ ಹೋರಾಟ ನಡೆಸುತ್ತಿದ್ದರಿಂದ ಟೆಸ್ಟ್ ಪಂದ್ಯ ಪ್ರೇಕ್ಷಕರನ್ನು ಸೀಟಿನಂಚಿಗೆ ತಂದು ಕೂರಿಸಿತ್ತು. ಪಂದ್ಯ ಹೀಗೆ ಅತ್ಯಂತ ರೋಚಕ ಘಟ್ಟದಲ್ಲಿ ಸಾಗುತ್ತಿರುವಾಗಲೇ ಅತ್ತ ಪ್ರೇಕ್ಷಕರು ಗ್ಯಾಲರಿಯಲ್ಲಿ‌ ಹೊಡೆದಾಡಿಕೊಳ್ಳಲಾರಂಭಿಸಿದರು..!
ಇಂಗ್ಲೆಂಡ್‌ ನಲ್ಲಿ ಪ್ರಖ್ಯಾತರಾದ ಮಾಜಿ ಫುಟ್ಬಾಲ್‌ ಆಟಗಾರ ಪೌಲ್ ಗ್ಯಾಸ್ಕೊಯ್ನ್  ಅವರ ಜೆರ್ಸಿ ಧರಿಸಿದ್ದ ಪ್ರೇಕ್ಷಕನೊಬ್ಬ ಮುಂದೆ ನುಗ್ಗಿ ಒಂದಿಬ್ಬರ ಮೇಲೆ ಮುಷ್ಠಿಯಿಂದ‌ ಬಲವಾಗಿ ಪಂಚ್ ಮಾಡಿದ್ದಾನೆ. ಅಷ್ಟರಲ್ಲಿ ಜೊತೆಗೂಡಿದ ಉಳಿದ ಪ್ರೇಕ್ಷಕರು  ಪರಸ್ಪರ ಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲಾರಂಭಿಸಿದ್ದಾರೆ. ಇಬ್ಬರ ನಡುವೆ ಹೊಡೆದಾಟ ಪ್ರಾರಂಭವಾಗಿ ಇಂಗ್ಲೆಂಡ್‌- ನ್ಯೂಜಿಲ್ಯಾಂಡ್‌ ಅಭಿಮಾನಿಗಳು ಎರಡು ಪಕ್ಷಗಳಾಗಿ ಬಡಿದಾಡಿಕೊಂಡಿದ್ದಾರೆ. ಯಾವುದೋ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದೇ ಅಭಿಮಾನಿಗಳು ರೊಚ್ಚಿಗೆದ್ದು ಕೈ ಕೈ ಮಿಲಾಯಿಸಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

ಉಳಿದ ಪ್ರೇಕ್ಷಕರು ಇವರ ಹಾಸ್ಯಾಸ್ಪದ ಹೊಡೆದಾಟವನ್ನು ನಿಲ್ಲಿಸಲು ಯತ್ನಿಸಿದರಾದರೂ ಅವರಿಬ್ಬರ ಕೋಪ ತಣ್ಣಗಾಗಿಸಲು ಸಾಧ್ಯವಾಗಲಿಲ್ಲ. ಉಳಿದ ಪ್ರೇಕ್ಷಕರಿಗೆ ಇವರ ಗಲಾಟೆ ನಗು ಉಕ್ಕಿಸಿದೆ. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಪೊಲೀಸರಿ ಪ್ರೇಕ್ಷಕರನ್ನು ಪ್ರತ್ಯೇಕಿಸಿ ಕ್ರೀಡಾಂಗಣದಿಂದ ಹೊರಗೆ ಕರೆದೊಯ್ದರು. ಈ ವಿಲಕ್ಷಣ ಕಾದಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ನಟ್ಟಿಗರು ಮೀಮ್ ಗಳನ್ನು ಹಂಚಿಕೊಂಡು ತಮಾಷೆ ಮಾಡುತ್ತಿದ್ದಾರೆ.
ಈ ಪಂದ್ಯದಲ್ಲಿ 51 ರನ್‌ ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ಓಲಿ ಪೋಪ್(‌ 82), ಜಾನಿ ಬೈರ್ಸ್ಟೋ (71) ಜೋ‌ ರೂಟ್ (86) ಭರ್ಜರಿ ಆಟದ ಬಲದಿಂದ 3 ವಿಕೆಟ್‌ ಗೆ  296 ರನ್‌ ಗಳ ಗುರಿ ಬೆನ್ನಟ್ಟಿ 3.0 ಯಲ್ಲಿ ಟೆಸ್ಟ್‌ ಸರಣಿಯನ್ನು ವಶಪಡಿಸಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!