ರಸ್ತೆ ಅಪಘಾತದಲ್ಲಿ ಮಗಳನ್ನು ಕಳೆದುಕೊಂಡ ನಟಿ ಅಮೃತಾ ನಾಯ್ಡು ಮನೆಗೆ ಹೊಸ ಅತಿಥಿಯ ಆಗಮನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಿರುತೆರೆ ನಟಿ ಅಮೃತಾ ರೂಪೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಮೃತಾ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಮೂಲಕ ನಟಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ಮತ್ತು ಶೋ ಮೂಲಕ ಗುರುತಿಸಿಕೊಂಡಿದ್ದ ಅಮೃತಾ ರೂಪೇಶ್ ಬದುಕಲ್ಲಿ ಇತ್ತೀಚೆಗೆಷ್ಟೇ ಸಾಕಷ್ಟು ದುಃಖದ ದಿನಗಳನ್ನು ಕಳೆದು ನಂತರ ಇದೀಗ ಮತ್ತೆ ಖುಷಿಯಾಗಿದ್ದಾರೆ.

ಇತ್ತೀಚಿಗಷ್ಟೆ ಅಮೃತಾ ರೂಪೇಶ್ ಮುದ್ದು ಮಗಳು ಸಮನ್ವಿ ಸಾವಿನ ನಂತರ ಸಾಕಷ್ಟು ಕುಗ್ಗಿ ಹೋಗಿದ್ದರು. ಇದೀಗ ಗಂಡು ಮಗು ಆಗಮನದಿಂದ ಕುಟುಂಬಕ್ಕೆ ಹೊಸ ಚೈತನ್ಯ ಸಿಕ್ಕಿದೆ.

ಮಗಳನ್ನು ಕಳೆದುಕೊಂಡು ನೋವಿನಲ್ಲಿಯೇ ತಾಯಿಯಾಗುತ್ತಿದ್ದ ಅಮೃತಾ ಬಾಳಲ್ಲಿ ಭರವಸೆಯೊಂದು ಇತ್ತು.ಈ ಕುರಿತು ಅಮೃತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ದರು.

‘ನನ್ನ ಜೀವನದಲ್ಲಿ ಒಂದು ದಿನ ಜೋರಾದ ಗುಡುಗು ಬಡಿದ ನಂತರ ನನ್ನ ಪ್ರಪಂಚ ನಲುಗಿತ್ತು. ನಾನು ಹಿಡಿದಿಟ್ಟುಕೊಳ್ಳಲು ಜೀವನದಲ್ಲಿ ಏನೂ ಇಲ್ಲಿ ಅನಿಸಿತ್ತು. ನನಗೆ ಏನೂ ಯಾವುದೂ ಅರ್ಥವಾಗರಲಿಲ್ಲ, ಉಸಿರಾಡುತ್ತಿದ್ದೇನೆ. ಆದರೆ ಒಳಗೆ ಸತ್ತಿದ್ದೇನೆ ಎಂದು ಭಾವಿಸಿದೆ. ನನ್ನ ಜೀವನದ ಸ್ಪೆಷಲ್ ವ್ಯಕ್ತಿಗಳಿಂದ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ನನ್ನ ಜೀವನ ಹೀಗಿದೆ. ನೀವು ನನ್ನೊಳಗೆ ಇನ್ನೊಂದು ಜೀವವಿದೆ ನನ್ನ ಜೀವನವನ್ನು ಮತ್ತೆ ಬದಲಾಯಿಸುತ್ತದೆ ಆ ಬೆಳಕನ್ನು ನೋಡುತ್ತೇನೆ ಎಂದು ನೆನಪಿಸುತ್ತಿದ್ದಿರಿ.’ ‘ನನ್ನೊಳಗಿರುವ ಪುಟ್ಟ ಜೀವ ಕಾಣಿಸಿಕೊಳ್ಳುತ್ತಿದೆ. ಜೀವನದಲ್ಲಿ ಎಂದೂ ಮಾಸದ ನೋವುಗಳು ಕಾಣಿಸಿಕೊಳ್ಳುತ್ತವೆ. ಇದು ಯಾವತ್ತೂ ಮರೆಯಲು ಅಸಾಧ್ಯ. ಎಲ್ಲ ಭಾವನೆಗಳನ್ನು ನನ್ನ ಮೇಲೆ ಹಾಕಿಕೊಳ್ಳಬಾರದು. ಕೆಲವು ವಿಷಯಗಳನ್ನು ಬದಲಾಯಿಸಲಾಗದಿದ್ದರೂ ಜೀವನದಲ್ಲಿ ಆ ನೋವಿನಿಂದ ಎಂದಿಗೂ ಚೇತರಿಸಿಕೊಳ್ಳುವುದಿಲ್ಲ. ಈ ನೋವುಗಳು ಏನಿದ್ದರೂ ಅದು ನನಗೆ ಮಾತ್ರ ಇರಬೇಕು. ಈ ಪುಟ್ಟ ಜೀವಕ್ಕೆ ಏನೂ ಗೊತ್ತಾಗಬಾರದು. ಅದು ಸದಾ ನನ್ನ ಸಂತೋಷದ ಕ್ಷಣಗಳನ್ನು ಮಾತ್ರ ನೋಡಬೇಕು,’ ಎಂದು ಅಮೃತಾ ಹೇಳಿ ಕೊಂಡಿದ್ದರು.

ಕೆಲವು ತಿಂಗಳ ಹಿಂದೆ ಅಮೃತಾ ನಾಯ್ಡುಮತ್ತು ಸಮನ್ವಿ ಬೆಂಗಳೂರಿನ ಕೋಣನಕುಂಟೆ ಬಳಿಯ ವಾಜರಹಳ್ಳಿಯಲ್ಲಿ ಪ್ರಯಾಣಿಸುವಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತವಾಗಿತ್ತು. 6 ವರ್ಷದ ಸಮನ್ವಿ ಸ್ಥಳದಲ್ಲೇ ಮೃತಪಟ್ಟಳು. ಈ ಘಟನೆ ಚಿತ್ರರಂಗಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ದೊಡ್ಡ ಶಾಕ್ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!