ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಜ್ ಮಹಲ್ ಒಳಗಡೆ ದೇಗುಲವಿದೆ ಎಂಬ ಅನೇಕ ಸಂಶಗಳಿಗೆ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಮಾಹಿತಿ ನೀಡಿದೆ.
ಆರ್‌ಟಿಐ ಮೂಲಕ ಸಲ್ಲಿಸಿದ ಅರ್ಜಿಗೆ ಮಾಹಿತಿ ನೀಡಿದ ಇಲಾಖೆ, ತಾಜ್ ಮಹಲ್‌ನ ನೆಲಮಾಳಿಗೆಯ 22 ಕೊಠಡಿಗಳಲ್ಲಿ ಯಾವುದೇ ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳು ಇಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದೆ.
ತಾಜ್ ಮಹಲ್ ನ ಸೆಲ್ಲಾರ್‌ನ ಮುಚ್ಚಿದ ಕೊಠಡಿಗಳನ್ನು ತೆರೆಯುವಂತೆ ಆಗ್ರಹಿಸಿ ಅಯೋಧ್ಯೆಯ ಬಿಜೆಪಿ ಮಾಧ್ಯಮ ಉಸ್ತುವಾರಿ ಡಾ. ರಜನೀಶ್ ಸಿಂಗ್ ಅವರು 7 ಮೇ 2022 ರಂದು ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ತಾಜ್ ಮಹಲ್‌ನ ನೆಲಮಾಳಿಗೆಯ 22 ಮುಚ್ಚಿದ ಕೊಠಡಿಗಳನ್ನು ತೆರೆಯಲು ಬೇಡಿಕೆ ಇತ್ತು.
ಈ ನಡುವೆ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರರು ತಾಜ್ಮಹಲ್ಗೆ ಸಂಬಂಧಿಸಿದಂತೆ ಆರ್‌ಟಿಐ ಮೂಲಕ ಎಎಸ್‌ಐನಿಂದ ಮಾಹಿತಿ ಕೇಳಿದ್ದು, ಎರಡು ಪ್ರಶ್ನೆಗಳನ್ನು ಇಟ್ಟಿದ್ದಾರೆ .
ತಾಜ್ ಮಹಲ್ ನಿರ್ಮಾಣವಾಗಿರುವ ಭೂಮಿ, ಆ ಜಾಗ ದೇವಸ್ಥಾನಕ್ಕೆ ಸೇರಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪುರಾವೆ ನೀಡಿ ಹಾಗೂ ಮುಚ್ಚಿದ 22 ಕೋಣೆಗಳ ನೆಲಮಾಳಿಗೆಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳಿವೆಯೇ ಎಂಬುದು ಎರಡನೇ ಪ್ರಶ್ನೆಯಾಗಿತ್ತು.
ಇದೀಗ ರ್‌ಟಿಐ ಪ್ರಶ್ನೆಗೆ ಎಎಸ್‌ಐ ಉತ್ತರವನ್ನು ನೀಡಿದೆ. ಮೊದಲ ಪ್ರಶ್ನೆಗೆ ಉತ್ತರವಾಗಿ ‘ಇಲ್ಲ’ ಎಂದು ಮಾತ್ರ ಬರೆದಿದ್ದಾರೆ. ಅದೇನೆಂದರೆ, ತಾಜ್ ಮಹಲ್ ಅನ್ನು ದೇವಸ್ಥಾನದ ಭೂಮಿಯಲ್ಲಿ ನಿರ್ಮಿಸಲಾಗಿಲ್ಲ. ಎರಡನೇ ಪ್ರಶ್ನೆಯಲ್ಲಿ, ನೆಲಮಾಳಿಗೆಗಳಲ್ಲಿ ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳಿಲ್ಲ ಎಂದು ಉತ್ತರದಲ್ಲಿ ಬರೆಯಲಾಗಿದೆ.