ನಾಯಿ ಬೊಗಳಿದ್ದಕ್ಕೆ ಕಬ್ಬಿಣದ ರಾಡ್‌ನಿಂದ ಮೂವರ ಮೇಲೆ ಹಲ್ಲೆ: ಹಿಂಸಾತ್ಮಕ ಕೃತ್ಯ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಡೆದುಹೋಗುತ್ತಿದ್ದ ವೇಲೆ ನಾಯಿ ಬೊಗಳಿದ್ದಕ್ಕೆ ಕೆರಳಿದ ವ್ಯಕ್ತಿ ಕಬ್ಬಿಣದ ರಾಡ್‌ನಿಂದ ನಾಯಿ ಹಾಗೂ ಕುಟುಂಬದ ಮೂವರ ಮೇಲೆ ಹಲ್ಲೆ ಮಾಡಿರವ ಘಟನೆ ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿ ನಡೆದಿದೆ. ನೆರೆಮನೆಯಲ್ಲಿ ವಾಸ ಮಾಡುತ್ತಿದ್ದ ಧರ್ಮವೀರ್‌ ದಹಿಯಾ ಎಂಬ ವ್ಯಕ್ತಿ ಮನೆ ಮುಂದೆ ನಡೆದು ಹೋಗುವ ವೇಳೆ ನಾಯಿ ಬೊಗುಳಿದೆ. ಇದರಿಂದ ಕುಪಿತಗೊಂಡ ವ್ಯಕ್ತಿ ನಾಯಿಯ ಬಾಲ ಹಿಡಿದು ದೂರಕ್ಕೆ ಎಸೆದಿದ್ದಾನೆ. ನಾಯಿಯ ಕೋಪ ನೆತ್ತಿಗೇರಿ ಧರ್ಮವೀರ್‌ನನ್ನು ಕಚ್ಚಿದೆ.

ಮತ್ತಷ್ಟು ಕೋಪೋದ್ರಿಕ್ತನಾದ ವ್ಯಕ್ತಿ ತನ್ನ ಮನೆಯಲ್ಲಿದ್ದ ಕಬ್ಬಿಣದ ರಾಡ್‌ ತಂದು ನಾಯಿ ಹಾಗೂ ಕುಟುಂಬದ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಕೃತ್ಯದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆರೆಮನೆಯ ರಕ್ಷಿತ್‌ ಹೇಳಿಕೆ ಆಧಾರದ ಮೇಲೆ ದೂರು ದಾಖಲಾಗಿದೆ. ರಕ್ಷಿತ್‌ ತಾಯಿ ಮಾವ ತಲೆಗೆ ಪೆಟ್ಟು ಬಿದ್ದಿದ್ದು, ರಕ್ತ ಹೆಪ್ಪುಗಟ್ಟಿದೆ ಎಂದಿದ್ದಾರೆ. ನಾಯಿ ಸೇರಿದಂತೆ ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ ಧರ್ಮವೀರ್‌ ದಹಿಯಾ ಮೇಲೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!