ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಭಾಗದಲ್ಲಿ ಮಳೆ ಇನ್ನಷ್ಟು ಬಿರುಸುಗೊಂಡಿದ್ದು, ಜೀವನದಿ ನೇತ್ರಾವತಿ ಪಾಯದ ಮಟ್ಟದತ್ತ ಹೆಜ್ಜೆಯಿಡುತ್ತಿದೆ.
ಗುರುವಾರ ಬೆಳಗ್ಗೆ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗಿದ್ದು, ನೆರೆಭೀತಿ ಹೆಚ್ಚಿಸಿದೆ.
ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ನದಿ ತೀರದ ಜನರ ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ. ಸಂಭಾವ್ಯ ಅಪಾಯ ಎದುರಿಸಲು ಸ್ಥಳಿಯಾಡಳಿತ ಸಜ್ಜಾಗಿದ್ದು, ಬೋಟ್ ಸಹಿತ ಅಗತ್ಯ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.