‘ಆಕಾಶಾ ಏರ್ ಲೈನ್’ ಆರಂಭಕ್ಕೆ ಸಿಕ್ಕಿತು ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಕೇಶ್ ಜುಂಜುನ್‌ ವಾಲಾ ಬೆಂಬಲಿತ ‘ಆಕಾಶ ಏರ್’ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ(ಡಿಜಿಸಿಎ) ಏರ್ ಆಪರೇಟರ್ ಪ್ರಮಾಣಪತ್ರವನ್ನು(ಎಒಸಿ) ಸ್ವೀಕರಿಸಿದೆ.ಈ ಮೂಲಕ ಈ ತಿಂಗಳ ಕೊನೆಯಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.
ಪ್ರಮುಖ ಷೇರು ಮಾರುಕಟ್ಟೆ ಹೂಡಿಕೆದಾರ ರಾಕೇಶ್ ಅವರಿಂದ ಉತ್ತೇಜಿಸಲ್ಪಟ್ಟ ಸ್ಟಾರ್ಟ್ ಅಪ್ ಕ್ಯಾರಿಯರ್ ಜುಲೈ ಕೊನೆಯಲ್ಲಿ ಸೇವೆಗಳನ್ನು ಪ್ರಾರಂಭಿಸಲಿದೆ.
ಏರ್‌ ಲೈನ್‌ ಕಾರ್ಯಾಚರಣೆಯ ಸಿದ್ಧತೆಗಾಗಿ AOC ಪಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಆಕಾಶ ಏರ್ ಪೂರ್ಣಗೊಳಿಸಿದೆ.
ಡಿಜಿಸಿಎಯ ಮೇಲ್ವಿಚಾರಣೆಯಲ್ಲಿ ಏರ್‌ ಲೈನ್ ಹಲವಾರು ವಿಮಾನಗಳನ್ನು ಯಶಸ್ವಿಯಾಗಿ ನಡೆಸುವುದರೊಂದಿಗೆ ಪ್ರಕ್ರಿಯೆಯು ಕೊನೆಗೊಂಡಿದೆ. ಹೂಡಿಕೆದಾರ ರಾಕೇಶ್ ಜುನ್‌ಜುನ್‌ ವಾಲಾ ಅವರ ಬೆಂಬಲದೊಂದಿಗೆ ವಿಮಾನಯಾನ ಸಂಸ್ಥೆಯು ತನ್ನ ಮೊದಲ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಜೂನ್ 21 ರಂದು ಭಾರತದಲ್ಲಿ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!