ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಆಹಾರದಲ್ಲಿ ಹಿತಮಿತ ಸಾಧಿಸಿ. ಇಲ್ಲವಾದರೆ ಹೊಟ್ಟೆ ಸಮಸ್ಯೆಗೆ ಗುರಿಯಾಗುವಿರಿ. ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ.
ವೃಷಭ
ವೃತ್ತಿಯಲ್ಲಿ ಎಷ್ಟೇ ಒತ್ತಡ ಇದ್ದರೂ ಕುಟುಂಬಸ್ಥರ ಬೇಕುಬೇಡ ವಿಚಾರಿಸಿ. ಅವರ ಬೇಡಿಕೆ ಈಡೇರಿಸಿ. ಇದರಿಂದ ಸಾಂಸಾರಿಕ ಸಾಮರಸ್ಯ ಮೂಡುವುದು.
ಮಿಥುನ
ಇಂದು ಎಲ್ಲವೂ ನಿಮಗೆ ಪೂರಕವಾಗಿ ನಡೆದರೂ ಮನಸ್ಸಿಗೆ ಮಾತ್ರ ಶಾಂತಿಯಿಲ್ಲ. ಯಾವುದೋ ವಿಚಾರವು ಮನಸ್ಸನ್ನು ಕೊರೆಯುತ್ತಿರುತ್ತದೆ.
ಕಟಕ
ನಿಮ್ಮ ಸುತ್ತಲಿನ ಜನರೊಂದಿಗೆ ಮಾತಿನ ಜಗಳ ನಡೆದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಹಣಕಾಸು ಸಮಸ್ಯೆ ಕಾಡುವುದು.
ಸಿಂಹ
ಧಾರ್ಮಿಕ ವಿಚಾರಗಳು ಆಸಕ್ತಿ ಕೆರಳಿಸಬಹುದು. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ. ಕೌಟುಂಬಿಕ ಆದ್ಯತೆಗಳು ಹೆಚ್ಚು. ಅದನ್ನು ಚೆನ್ನಾಗಿ ನಿಭಾಯಿಸಿರಿ.
ಕನ್ಯಾ
ಹಿರಿಯರೊಂದಿಗೆ ವ್ಯವಹರಿಸುವಾಗ ವಿಧೇಯತೆ ಇರಲಿ. ಇಲ್ಲವಾದರೆ ಅವರ ಅವಕೃಪೆಗೆ ತುತ್ತಾಗುವಿರಿ. ಕೌಟುಂಬಿಕ ವಾಗ್ವಾದ, ವೈಮನಸ್ಸು ಸಂಭವ.
ತುಲಾ
ಎಂದಿಗಿಂತ ಹೆಚ್ಚು ಹೊಣೆ ಹೆಗಲೇರುವುದು. ಅದನ್ನು ಸರಿಯಾಗಿ ನಿಭಾಯಿಸಿ. ಉದಾಸೀನ ತೋರಿದರೆ ನಿಮಗೆ ಪ್ರತಿಕೂಲವಾದೀತು.
ವೃಶ್ಚಿಕ
ಕೌಟುಂಬಿಕ ವಾಗ್ವಾದದಿಂದ ನೆಮ್ಮದಿ ನಾಶ. ಮಾತಿಗೆ ಮಾತು ಕೂಡಿಸದಿರಿ. ನೀವು ಮೌನ ತಾಳಿದರೆ ಅದರಿಂದ ಶಾಂತಿ ಮೂಡಬಹುದು.
ಧನು
ಬಹುಸಮಯದಿಂದ ಬಾಕಿ ಉಳಿಸಿದ್ದ ಕಾರ್ಯ ಪೂರೈಸಲು ಆದ್ಯತೆ ಕೊಡಿ. ನಿಮ್ಮ ದಕ್ಷತೆಯನ್ನು ಹಿರಿಯರು ಮೆಚ್ಚಿಕೊಳ್ಳುವರು. ಆರ್ಥಿಕ ಲಾಭ.
ಮಕರ
ಪರಿಸ್ಥಿತಿ ನಿಮಗೆ ಪ್ರತಿಕೂಲವಾಗಿರುವಂತೆ ಕಂಡರೂ ವಾಸ್ತವದಲ್ಲಿ ನಿಮಗೇನೂ ಹಾನಿಯಾಗದು. ದಿನದಂತ್ಯಕ್ಕೆ ಎಲ್ಲವೂ ನಿಮ್ಮ ಪರವಾಗುವುದು.
ಕುಂಭ
ಬದುಕಿನಲ್ಲಿ ಆಶಾವಾದ ಇಟ್ಟುಕೊಳ್ಳಿ. ಸಣ್ಣ ಹಿನ್ನಡೆಗೆ ಅಧೀರರಾಗದಿರಿ. ನಿಮದೆ ಪೂರಕ ಪರಿಸ್ಥಿತಿ ಬಂದೇ ಬರುವುದು. ಕೌಟುಂಬಿಕ ಸಹಕಾರ.
ಮೀನ
ಇಂದು ನಿಮಗೆ ಮಾನಸಿಕ ಅಸಹನೆ ಹೆಚ್ಚು. ಅದಕ್ಕೆ ಕಾರಣ ನಿಮ್ಮ ಕಾರ್ಯ, ಉದ್ದೇಶ ಸರಿಯಾಗಿ ಈಡೇರದಿರುವುದು.ಸಹನೆಯಿರಲಿ.