ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಕ್ರಮ್ ಅವರು ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ನಟ ವಿಕ್ರಮ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.
ಶುಕ್ರವಾರ ಸಂಜೆ ವಿಕ್ರಮ್ ನಟನೆಯ ಪೊನ್ನಿಯನ್ ಸೆಲ್ವಂ ಭಾಗ1 ಚಿತ್ರದ ಟೀಸರ್ ಬಿಡುಗಡೆ ಮಾಡಬೇಕಿತ್ತು. ಆದರೆ ವಿಕ್ರಮ್ ಅನಾರೋಗ್ಯದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.ಆದರೆ ಅವರ ನಟನೆಯ ಮತ್ತೊಂದು ಚಿತ್ರ ಕೋಬ್ರಾ ಆಡಿಯೋ ಬಿಡುಗಡೆ ವೇಳೆ ವಿಕ್ರಮ್ ಭಾಗಿಯಾಗಲಿದ್ದಾರೆ ಎಂದು ಈ ಚಿತ್ರದ ನಿರ್ದೇಶಕ ಅಜಯ್ ಗಣಮುತ್ತು ಹೇಳಿದ್ದಾರೆ.
ವಿಕ್ರಮ್ ಅವರು ಸಂಪೂರ್ಣ ಚೇತರಿಸಿಕೊಳ್ಳುತ್ತಿದ್ದು, ಅವರು ಇನ್ನು ಮೂರು ದಿನದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದಿರು ನಿರ್ದೇಶಕ ಅಜಯ್ ಕಾರ್ಯಕ್ರಮಕ್ಕೂ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ವಿಕ್ರಮ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.