ಹೊಸದಿಗಂತ ವರದಿ, ಕೊಪ್ಪಳ:
ಕೊಪ್ಪಳ ಜಿಲ್ಲಾದ್ಯಂತ ಶನಿವಾರ ದಿನಪೂರ್ತಿ ಮೋಡಕವಿದ ವಾತಾವರಣವಿದ್ದು, 21 ಮಿ.ಮೀ. ಮಳೆಯಾಗಿದೆ.
ಕೆಲ ಹೊತ್ತು ಜೋರಾಗಿ ಮಳೆ ಬಂದರೆ, ಇನ್ನೂ ಕೆಲ ಸಮಯ ಜಿಟಿಜಿಟಿಯಾಗಿ ಮಳೆ ಸುರಿಯಿತು. ಶನಿವಾರದ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಮರಳಿ, ವೆಂಕಟಗಿರಿ, ಕೊಪ್ಪಳ ನಗರ, ಅಳವಂಡಿ, ಹಿಟ್ನಾಳ್, ಕುಷ್ಟಗಿ ಸೇರಿ ಜಿಲ್ಲಾದ್ಯಂತ 21 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ.
ಮುಂಗಾರು ಮಳೆಯಿಂದಾಗಿ ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿವೆ. ನಗರ ಪ್ರದೇಶದಲ್ಲಿ ಕೆಲಸದ ನಿಮಿತ್ಯ ಗ್ರಾಮೀಣ ಪ್ರದೇಶಗಳಿಂದ ಇಲ್ಲಿಗೆ ಬಂದ ಜನ, ವಿದ್ಯಾರ್ಥಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು ಮಳೆಯಲ್ಲಿ ನೆಂದುಕೊಂಡೇ ನಿತ್ಯದ ಕೆಲಸಗಳನ್ನು ಮಾಡಬೇಕಾಯಿತು.