ವಿದ್ಯುತ್ ಶಾಕ್‌ ಹೊಡೆದು ಪುಟ್‌ಬಾಲ್ ಆಟಗಾರ ಸಾವು

ಹೊಸದಿಗಂತ ವರದಿ, ಮಂಡ್ಯ:

ವಿದ್ಯುತ್ ಶಾಕ್‌ನಿಂದಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಪುಟ್ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾನೆ.
ಕಳೆದ ಕೆಲ ದಿನಗಳ ಹಿಂದೆ ತನ್ನ ಮನೆಯಲ್ಲೇ ವಿದ್ಯುತ್ ಸ್ಪರ್ಶಕ್ಕೊಳಗಾಗಿ ತೀವ್ರವಾಗಿ ಅಸ್ವಸ್ಥನಾಗಿದ್ದ ಆತನನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಪೋಷಕರು ಸಾಲ ಸೂಲ ಮಾಡಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರು.
ಸಾಲದೆಂಬಂತೆ ಹೆಚ್ಚಿನ ಚಿಕಿತ್ಸಾ ವೆಚ್ಚವಾದ ಕಾರಣ ಭರಿಸಲು ಸಾಧ್ಯವಾಗದೆ ಆತನ ಸ್ನೇಹಿತರು, ಕ್ರೀಡಾಪಟುಗಳು ಹಾಗೂ ಇತರರು ಸಾಮಾಜಿಕ ಜಾಲತಾಣದಲ್ಲಿ ವಿಶ್ವಾಸ್‌ನ ಸ್ಥಿತಿಯನ್ನು ವಿವರಿಸಿ ಸಹಾಯಕ್ಕಾಗಿ ಮನವಿ ಮಾಡಿದ್ದರು. ಇದರಿಂದಾಗಿ ಆಸ್ಪತ್ರೆ ನಿಗಧಿ ಮಾಡಿದ್ದ ಅಂದಾಜು ಮೊತ್ತ 10.82 ಲಕ್ಷ ರೂ. ಸಂಗ್ರಹವಾಗಿತ್ತು. ಹಲವಾರು ಮಂದಿ ಆರ್ಥಿಕ ಸಹಾಯ ಮಾಡಿದ್ದರು.

ವಿಶ್ವಾಸ್‌ನ ಚಿಕಿತ್ಸೆಗೆ ಹಣ ಹರಿದುಬಂದಿತ್ತು. ಆದರೆ ಆಸ್ಪತ್ರೆ ವೈದ್ಯರು ಚಿಕಿತ್ಸೆಗೆ ಸ್ಪಂಧಿಸುತ್ತಿಲ್ಲವೆಂಬ ಕಾರಣದಿಂದಾಗಿ ಕೈಚೆಲ್ಲಿದ್ದರು. ಇದರಿಂದಾಗಿ ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಶ್ವಾಸ್‌ನನ್ನು ಮಂಡ್ಯದ ಹೊರ ವಲಯದಲ್ಲಿ ಸ್ಯಾಂಜೋ ಆಸ್ಪತ್ರೆಗೆ ಶುಕ್ರವಾರ ದಾಖಲಿಸಲಾಗಿತ್ತು. ಚಿಕಿತ್ಸೆ ಲಕಾರಿಯಾಗದೆ ಶನಿವಾರ ಮುಂಜಾನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಅಂತಿಮ ಮೆರವಣಿಗೆ :
ವಿಶ್ವಾಸ್ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆ ಆತನ ಸ್ನೇಹಿತರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸೇರಿದಂತೆ ಹಲವಾರು ಮಂದಿ ಆತನ ಮನೆಯ ಬಳಿ ಜಮಾಯಿಸಿದರು. ಬಳಿಕ ತೆರೆದ ವಾಹನದಲ್ಲಿ ಮೃತ ವಿಶ್ವಾಸ್‌ನ ಕಳೇಬರಹವನ್ನು ಗುತ್ತಲು ರಸ್ತೆ, ಸಕ್ಕರೆ ವೃತ್ತ ಸೇರಿದಂತೆ ವಿವಿಧೆಡೆ ಮೆರವಣಿಗೆ ಮೂಲಕ ಶ್ರೀ ಅರ್ಕೇಶ್ವರ ದೇವಾಲಯದ ಮುಂಭಾಗದಲ್ಲಿರುವ ರುದ್ರಭೂಮಿಗೆ ಕೊಂಡೊಯ್ದು ಸಂಜೆ ಅಂತ್ಯಸಂಸ್ಕಾರ ನಡೆಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!