ಹೊಸದಿಗಂತ ವರದಿ, ಉಡುಪಿ:
ವ್ಯಾಟ್ಸಾಪ್ ಸ್ಟೇಟನ್ ನಲ್ಲಿ ನಲ್ಲಿ ಹಿಂದು ದೇವರವನ್ನು ಅವಮಾನ ಮಾಡಿದ ವಿಚಾರಕ್ಕೆ ಸಂಭಂದಿಸಿ ಶ್ರೀರಾಮಸೇನೆಯ ಅಧ್ಯಕ್ಷ ಮೋಹನ್ ಭಟ್ ಅವರು ನೀಡಿದ ದೂರಿನಂತೆ ಪೋಲಿಸರು ಶನಿವಾರ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಡೇವಿಡ್‌ರಾಜ್
ಜುಲೈ 08 ರಂದು ಸಂಜೆ ಡೇವಿಡ್ ರಾಜ್ ಎಂಬಾತ ಹಿಂದೂ ದೇವರನ್ನು ಮತ್ತು ಧರ್ಮವನ್ನು ಅವಹೇಳನ ಮಾಡುವ ಉದ್ಧೇಶದಿಂದ ವಿಡಿಯೋ ತುಣುಕೊಂದನ್ನು ವಾಟ್ಸಪ್ ಸಂದೇಶವನ್ನು ಹಾಕಿರುವುದನ್ನು ಶ್ರೀರಾಮ ಸಂಘಟನೆಯ ಕಾರ್ಯಕರ್ತರು ಗಮನಿಸಿದ್ದಾರೆ. ಈ ಹಿನ್ನಲೆಯಲ್ಲಿ ಮೋಹನ್ ಭಟ್ ಅವರು ಉಡುಪಿ ನಗರ ಠಾಣೆಯಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ.