ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವೀಪ ರಾಷ್ಟ್ರ ಶ್ರೀಲಂಕೆಯಲ್ಲಿನ ದಂಗೆ, ಅಧ್ಯಕ್ಷರು, ಪ್ರಧಾನಿ ನಿವಾಸದಲ್ಲಿನ ದಾಂಧಲೆ ಬೆನ್ನಿಗೇ ಕೊಲಂಬೊಕ್ಕೆ ಭಾರತ ಸೇನೆಯನ್ನು ರವಾನಿಸಲಿದೆ ಎಂಬ ಊಹಾಪೋಹಗಳನ್ನು ಶ್ರೀಲಂಕಾದ ಭಾರತೀಯ ಹೈಕಮಿಷನ್ ಸ್ಪಷ್ಟವಾಗಿ ತಳ್ಳಿಹಾಕಿದೆ.
ಭಾರತ ಲಂಕೆಗೆ ಸೇನೆ ರವಾನಿಸಲಿದೆ ಎಂಬ ಕುರಿತಾಗಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹದ ವರದಿಗಳು ರವಾನೆಯಾಗುತ್ತಿವೆ. ಇದನ್ನು ಹೈಕಮಿಷನ್ ಸ್ಪಷ್ಟವಾಗಿ ತಳ್ಳಿಹಾಕುತ್ತಿದೆ. ಈ ವರದಿಗಳು, ಅಭಿಪ್ರಾಯಗಳಿಗೆ ಭಾರತ ಸರ್ಕಾರ ಬಾಧ್ಯಸ್ಥ ಅಲ್ಲ ಎಂದು ಭಾರತೀಯ ಹೈಕಮಿಷನ್ ಆಯೋಗವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾಸತ್ತಾತ್ಮಕ ಮೌಲ್ಯಗಳು, ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮೃದ್ಧಿ ಮತ್ತು ಪ್ರಗತಿಗಾಗಿ ಅವರ ಆಕಾಂಕ್ಷೆಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಶ್ರೀಲಂಕಾದ ಜನರೊಂದಿಗೆ ಭಾರತ ನಿಂತಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ತಮ್ಮ ಬಾಗ್ಚಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.