ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಎಂದಾಕ್ಷಣ ನೆನಪಿಗೆ ಬರೋದು ಶಿಸ್ತು, ಸಂಯಮ, ಗೌರವ. ಸಮವಸ್ತ್ರ ಧರಿಸಿದರೆ ಸಾಕು ಅವರ ಎಲ್ಲಾ ಮನರಂಜನೆಗಳಿಗೂ ಬ್ರೇಕ್ ಹಾಕಿದಂತೆಯೇ ಸರಿ. ಅಪ್ಪಿ-ತಪ್ಪಿಯೂ ಶಿಸ್ತಿಗೆ ಧಕ್ಕೆ ಬರುವಂತೆ ವರ್ತಿಸುವಂತಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟಿಕ್-ಟಾಕ್, ರೀಲ್ಸ್ ಅಂತೆಲ್ಲಾ ಬಂದಿವೆ. ಜನಸಾಮಾನ್ಯರಂತೆ ಹಾಡುಗಳಿಗೆ ಹೆಜ್ಜೆ ಹಾಕಿದ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿ ಕೆಲಸ ಕಳೆದುಕೊಂಡಿದ್ದೂ ಉಂಟು.
ಹೀಗೆ ಸದಾ ಗಾಂಭೀರ್ಯ ಕೆಲಸದಲ್ಲಿ ತೊಡಗಿರುವ ಪೊಲೀಸರಿಗೆ ತಾವೂ ಎಲ್ಲರಂತೆ ಇರುವ ಸಂದರ್ಭ ಒದಗಿಬಂದಿದೆ. ಮಹಾರಾಷ್ಟ್ರದ ವಾರ್ಕರಿ ವಿಠ್ಠಲ ಯಾತ್ರೆಯಲ್ಲಿ ತಾವೂ ಹೆಜ್ಜೆ ಹಾಕಿದ್ದಾರೆ. ಪಾಂಡುರಂಗ ವಿಠಲ ಮೆರವಣಿಗೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮಹಿಳಾ ಕಾನ್ಸ್ಟೇಬಲ್ಸ್ ಎಲ್ಲರೂ ನೃತ್ಯ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಖುಷಿಖುಷಿಯಾಗಿ ಎಲ್ಲಾ ಅಧಿಕಾರಿಗಳೂ ಯಾತ್ರೆಯಲ್ಲಿ ಪಾಲ್ಗೊಂಡು ನೃತ್ಯ ಮಾಡಿರುವ ದೃಶ್ಯ ಕಣ್ಣಿಗೆ ಕಟ್ಟುವಂತಿದೆ. ಹಬ್ಬದ ಸಂದರ್ಭದಲ್ಲಾದರೂ ಎಲ್ಲರೂ ಖುಷಿಯಾಗರಿಲಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
Maharashtra Police joined Warkaris celebration of Panduranga Vitthala procession….🥰🙏🕉🚩 pic.twitter.com/YYNd920VuZ
— Adarsh Hegde (@adarshahgd) July 11, 2022