ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ನ 9ನೇ ಆವೃತ್ತಿ’ ಶೀಘ್ರದಲ್ಲೇ ಆರಂಭಗೊಳ್ಳುವ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ಅವರು, ‘ಬಿಗ್ಬಾಸ್ ಕನ್ನಡದ ಹೊಸ ಆವೃತ್ತಿಯ ಪ್ರೊಮೊ ಶೂಟಿಂಗ್ ಅತ್ಯಾಕರ್ಷಕ ಆಗಿತ್ತು. ಇಡೀ ತಂಡದ ಪ್ರಯತ್ನಕ್ಕೆ ಧನ್ಯವಾದಗಳು. ಚಿತ್ರೀಕರಣದಲ್ಲಿ ಭಾಗವಹಿಸಿರುವ ಎಲ್ಲ ವ್ಯಕ್ತಿಗಳಿಗೂ ಧನ್ಯವಾದಗಳು. ನೀವೆಲ್ಲರೂ ಶೀಘ್ರದಲ್ಲೇ ಪ್ರೊಮೊಗಾಗಿ ಎದುರುನೋಡಬಹುದು’ ಎಂದು ಹೇಳಿದ್ದಾರೆ.
ಕೋವಿಡ್ನಿಂದಾಗಿ 2020ರಲ್ಲಿ ಬಿಗ್ಬಾಸ್ ರಿಯಾಲಿಟಿ ಶೋ ನಡೆದಿರಲಿಲ್ಲ. ಆದರೆ, 2021ರಲ್ಲಿ 8ನೇ ಆವೃತ್ತಿ ನಡೆಸಲಾಗಿತ್ತು. ಕೋವಿಡ್ನ 2ನೇ ಅಲೆಯ ಕಾರಣ ಅರ್ಧಕ್ಕೆ ಮೊಟಕಗೊಂಡಿದ್ದ ಶೋ ತದ ನಂತರ ಪೂರ್ಣಗೊಳಿಸಲಾಗಿತ್ತು.