ರಿಯಾಲಿಟಿ ಶೋ ಬಿಗ್​ಬಾಸ್​​ ಕುರಿತು ಮಾಹಿತಿ ಹಂಚಿಕೊಂಡ ಕಿಚ್ಚ ಸುದೀಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್​ಬಾಸ್​​ನ 9ನೇ ಆವೃತ್ತಿ’ ಶೀಘ್ರದಲ್ಲೇ ಆರಂಭಗೊಳ್ಳುವ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್​ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಟ್ವೀಟ್​ ಮಾಡಿರುವ ಅವರು, ‘ಬಿಗ್​​ಬಾಸ್​​ ಕನ್ನಡದ ಹೊಸ ಆವೃತ್ತಿಯ ಪ್ರೊಮೊ ಶೂಟಿಂಗ್​ ಅತ್ಯಾಕರ್ಷಕ ಆಗಿತ್ತು. ಇಡೀ ತಂಡದ ಪ್ರಯತ್ನಕ್ಕೆ ಧನ್ಯವಾದಗಳು. ಚಿತ್ರೀಕರಣದಲ್ಲಿ ಭಾಗವಹಿಸಿರುವ ಎಲ್ಲ ವ್ಯಕ್ತಿಗಳಿಗೂ ಧನ್ಯವಾದಗಳು. ನೀವೆಲ್ಲರೂ ಶೀಘ್ರದಲ್ಲೇ ಪ್ರೊಮೊಗಾಗಿ ಎದುರುನೋಡಬಹುದು’ ಎಂದು ಹೇಳಿದ್ದಾರೆ.
ಕೋವಿಡ್​ನಿಂದಾಗಿ 2020ರಲ್ಲಿ ಬಿಗ್​ಬಾಸ್​ ರಿಯಾಲಿಟಿ ಶೋ ನಡೆದಿರಲಿಲ್ಲ. ಆದರೆ, 2021ರಲ್ಲಿ 8ನೇ ಆವೃತ್ತಿ ನಡೆಸಲಾಗಿತ್ತು. ಕೋವಿಡ್​​​ನ 2ನೇ ಅಲೆಯ​ ಕಾರಣ ಅರ್ಧಕ್ಕೆ ಮೊಟಕಗೊಂಡಿದ್ದ ಶೋ ತದ ನಂತರ ಪೂರ್ಣಗೊಳಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!