ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಶ್ಮಿತಾ ಸೇನ್ ಉದ್ಯಮಿ, ಐಪಿಎಲ್ನ ಮಾಜಿ ಚೇರ್ಮನ್ ಲಲಿತ್ ಮೋದಿ ಅವರ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಸಖತ್ ಟ್ರೆಂಡಿಂಗ್ನಲ್ಲಿದ್ದು, ಗುರುವಾರವಷ್ಟೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲಲಿತ್ ಮೋದಿ ತಿಳಿಸಿದ್ದರು.
‘ನನ್ನ ಸಂಗಾತಿ ಸುಶ್ಮಿತಾ ಸೇನ್… ನಾವು ಪ್ರೀತಿಸುತ್ತಿದ್ದೇವೆ.. ನಾವು ಮದುವೆಯಾಗಿಲ್ಲ… ಆದರೆ ಡೇಟಿಂಗ್ ಮಾಡುತ್ತಿದ್ದೇವೆ… ಒಂದು ದಿನ ಮದುವೆಯೂ ಜರುಗಲಿದೆ..’ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು, ಒಂದಷ್ಟು ಫೋಟೋಗಳನ್ನು ಲಲಿತ್ ಮೋದಿ ಹಂಚಿಕೊಂಡಿದ್ದರು. ಇದೀಗ ಈ ಬಗ್ಗೆ ಸುಶ್ಮಿತಾ ಸೇನ್ ಅವರ ಮಾಜಿ ಪ್ರಿಯಕರ ರೋಹ್ಮನ್ ಶಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಮಾಜಿ ಪ್ರೇಯಸಿ ಸುಶ್ಮಿತಾ ಸೇನ್ ಅವರು ಈಗ ಲಲಿತ್ ಮೋದಿ ಜೊತೆ ಪ್ರೀತಿಯಲ್ಲಿರುವ ವಿಚಾರ ತಿಳಿದು ರೋಹ್ಮನ್ ಶಾಲ್ ಪ್ರತಿಕ್ರಿಯೆ ನೀಡಿದ್ದಾರೆ. ‘ಅವರು ಸಂತೋಷವಾಗಿರಲಿ.. ಪ್ರೀತಿ ಎಂಬುದು ಸುಂದರವಾದದ್ದು.. ನನಗೆ ಗೊತ್ತಿದೆ, ಅವರು (ಸುಶ್ಮಿತಾ) ಯಾರನ್ನಾದರೂ ಆಯ್ಕೆ ಮಾಡಿದರೆ, ಅವರು ಯೋಗ್ಯವೇ ಆಗಿರುತ್ತಾರೆ..’ ಎಂದಿದ್ದಾರೆ. ರೋಹ್ಮನ್ ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.
ವಯಸ್ಸಿನಲ್ಲಿ ತಮಗಿಂತಲೂ 15 ವರ್ಷ ಚಿಕ್ಕವನಾಗಿರುವ ರೋಹ್ಮನ್ ಶಾಲ್ ಜೊತೆಗೆ 46ರ ಹರೆಯದ ಸುಶ್ಮಿತಾ ಡೇಟಿಂಗ್ ನಡೆಸುತ್ತಿದ್ದರು. ಆದರೆ ಕಳೆದ ವರ್ಷ ಡಿಸೆಂಬರ್ನಲ್ಲಿ ರೋಹ್ಮನ್ ಜೊತೆಗಿನ ಪ್ರೀತಿಗೆ ವಿದಾಯ ಹೇಳಿದ್ದರು. ‘ನಾವಿಬ್ಬರು ಸ್ನೇಹಿತರಾಗಿ ಪರಿಚಯ ಆದೆವು. ಈಗ ಪುನಃ ಸ್ನೇಹಿತರಾಗಿದ್ದೇವೆ. ಈ ಸಂಬಂಧವು ದೀರ್ಘವಾಗಿತ್ತು. ನಮ್ಮ ನಡುವಿನ ಪ್ರೀತಿ ಮಾತ್ರ ಹಾಗೇ ಉಳಿದಿದೆ..’ ಎಂದು ಹೇಳಿ, ರೋಹ್ಮನ್ ಜೊತೆಗಿನ ಪ್ರೀತಿ ಬಂಧಕ್ಕೆ ಅಂತ್ಯ ಹಾಡಿದ್ದರು ಸುಶ್ಮಿತಾ. ಈಗ 58 ವರ್ಷದ ಲಲಿತ್ ಮೋದಿ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಸುಶ್ಮಿತಾ.