ಪಿವಿ ಸಿಂಧು ಬಗಲಿಗೆ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಭಾರತದ ಸ್ಟಾರ್‌ ಶೆಟ್ಲರ್‌ ಪಿವಿ ಸಿಂಧು ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ ಗೆದ್ದಿದ್ದಾರೆ.
ಭಾನುವಾರ ನಡೆದ ಮಹಿಳೆಯರ ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ 11ನೇ ಶ್ರೇಯಾಂಕಿತಯ ಆಟಗಾರ್ತಿ ಚೀನಾದ ವಾಂಗ್ ಝಿ ಯಿ ಅವರನ್ನು ಸೋಲಿಸುವ ಮೂಲಕ ಸಿಂಧು ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.

ಫೈನಲ್‌ ಸೆಣಸಾಟದಲ್ಲಿ ಒಲಂಪಿಕ್‌ ಪದಕ ವಿಜೇತೆ ಸಿಂಧು 22ರ ಹರೆಯದ ಆಟಗಾರ್ತಿ ವಾಂಗ್ ವಿರುದ್ಧ 21-9, 11-21, 21-15 ರಲ್ಲಿ ಗೆದ್ದು ಬೀಗಿದರು. ಕೆಲದಿನಗಳ ಹಿಂದೆ ನಡೆದಿದ್ದ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ ಶಿಪ್‌ ನಲ್ಲಿಯೂ ಸಿಂಧು ಚೀನಾದ ಆಟಗಾರ್ತಿ ವಾಂಗ್‌ ರನ್ನು ಸೋಲಿಸಿದ್ದರು.

ಈ ಗೆಲುವಿನ ಮೂಲಕ ಸಿಂಧು ಸಿಂಗಾಪೂರ ಓಪನ್‌ ಗೆದ್ದ ಎರಡನೇ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಈ ಮೊದಲು 2010ರಲ್ಲಿ ಸೈನಾ ನೆಹ್ವಾಲ್‌ ಜಯಭೇರಿ ಬಾರಿಸಿದ್ದರು. ಪುರುಷರ ವಿಭಾಗದಲ್ಲಿ ಸಾಯಿಪ್ರಣೀತ್(‌ 2017) ಪ್ರಶಸ್ತಿ ಗೆದ್ದ ಏಕೈಕ ಭಾರತೀಯ ಆಟಗಾರ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!