ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೆಸ್…ಇದು ಪಕ್ಕಾ ಹಳ್ಳಿ ಊಟ… ಮಳೆಗಾಲದಲ್ಲಂತೂ `ಕೆಸು’ ಧಾರಾಳ. ಎಲ್ಲಿನೋಡಿದ್ರೂ ಕೆಸುವಿನದ್ದೇ ಹವಾ. ಈ ಕೆಸು ಆರೋಗ್ಯಕ್ಕೂ ಉತ್ತಮ. ರುಚಿಯೂ ಹೌದು. ಕೆಸುವಿನ ದಂಟು, ಹಲಸಿನ ಬೀಜ ಮಸ್ತ್ ಕಾಂಬಿನೇಶನ್ ಕಣ್ರೀ
ಕೆಸುವಿನ ದಂಟು ತಂದು ಸಣ್ಣಗೆ ಹೆಚ್ಚಿಕೊಳ್ಳಿ. ಹಲಸಿನ ಬೀಜ ಶುಚಿಗೊಳಿಸಿ , ಸಣ್ಣಗಾತ್ರದಲ್ಲಿ ತುಂಡು ಮಾಡಿ ಅಥವಾ ಜಜ್ಜಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಸ್ವಲ್ಪ ಹೆಚ್ಚು ತೆಂಗಿನೆಣ್ಣೆಯನ್ನು ಹಾಕಿ ಬೇವಿನ ಸೊಪ್ಪಿನ ಒಗ್ಗರಣೆ ಸಿದ್ದಪಡಿಸಿ. ನಂತರ ಬಾಣಲೆಗೆ ಕೆಸು ಹಾಗೂ ಹಲಸಿನ ಬೀಜ ಹಾಕಿ ಸ್ವಲ್ಪ ನೀರು ಹಾಕಿ ಬೇಯಲಿಡಿ. ರುಚಿಗೆ ಬೇಕಾದಷ್ಟು ಉಪ್ಪು, ಖಾರ ಪುಡಿ ಹಾಗು ಅರಶಿನ ಸೇರಿಸಿ. ಸ್ವಲ್ಪ ಬೆಲ್ಲ, ಹುಣಸೆ ಹುಳಿ ಹಾಕಿ. ಸರಿಯಾಗಿ ಬೇಯಿಸಿ. ತೆಂಗಿನ ಕಾಯಿ ತುರಿಯನ್ನು ಸೇರಿಸಿಕೊಳ್ಳಿ. ರುಚಿ ರುಚಿಯ ಪಲ್ಯ ಸಿದ್ಧ. ಕುಚ್ಚಲಕ್ಕಿ ಅನ್ನದೊಂಗಿಗೆ ಸೂಪರ್.