ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರನೇ ಹಾಗೂ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ಭಾರತ ತಂಡಕ್ಕೆ 260 ರನ್ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ, 45.5 ಓವರ್‌ಗಳಿಗೆ 259 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾಗೆ 260 ರನ್‌ಗಳ ಗುರಿಯನ್ನು ನೀಡಿದೆ.
ಇಂಗ್ಲೆಂಡ್ ಪರ ಜೇಸನ್ ರಾಯ್ 41 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ, ತಂಡದ ಜವಾಬ್ದಾರಿ ಹೊತ್ತ ನಾಯಕ ಜೋಸ್ ಬಟ್ಲರ್ 80 ಎಸೆತಗಳಲ್ಲಿ 60 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಬಟ್ಲರ್ ಜೊತೆಗೆ ಬೆನ್ ಸ್ಟೋಕ್ಸ್ 27, ಮೊಯೀನ್ ಅಲಿ 34, ಲಿಯಾಮ್ ಲಿವಿಂಗ್‌ಸ್ಟೋನ್ 27 ಹಾಗೂ ಕ್ರೈಗ್ ಓವರ್ಟನ್ 32 ರನ್‌ಗಳ ನಿರ್ಣಾಯಕ ಕೊಡುಗೆಯನ್ನು ನೀಡಿದರು.
ಭಾರತ ತಂಡದ ಪರ ಪವರ್‌ಪ್ಲೇನಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ ಎರಡೂ ವಿಕೆಟ್ ಪಡೆದರು. ಮಧ್ಯಮ ಓವರ್‌ಗಳಲ್ಲಿ ಶಾರ್ಟ್ ರಣತಂತ್ರವನ್ನು ಪ್ರಯೋಗಿಸುವ ಮೂಲಕ ಹಾರ್ದಿಕ್ ಪಾಂಡ್ಯ(24ಕ್ಕೆ4), ಜೆಸನ್ ರಾಯ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಸೇರಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಿತ್ತರು. ಯುಜ್ವೇಂದ್ರ ಚಹಲ್ 3 ಮತ್ತು ರವೀಂದ್ರ ಜಡೇಜಾ ಏಕೈಕ ವಿಕೆಟ್ ಪಡೆದರು.