2,000 ಉದ್ಯೋಗಿಗಳನ್ನು ಸೇರಿಸಿಕೊಳ್ಳುತ್ತಿದೆ ಭಾರತದ ಈ ಗ್ರಾಮಕೇಂದ್ರಿತ ಬಹುರಾಷ್ಟ್ರೀಯ ಕಂಪನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗ್ರಾಮೀಣಪ್ರದೇಶದಲ್ಲಿದ್ದುಕೊಂಡೇ ಜಗತ್ತಿನಾದ್ಯಂತ ಸೇವೆ ನೀಡುತ್ತ ಉದ್ಯೋಗಕ್ಕೊಂದು ಹೊಸ ಆಯಾಮ ಕೊಟ್ಟ ಭಾರತೀಯ ಮೂಲದ ಬಹುರಾಷ್ಟ್ರೀಯ ಕಂಪನಿ ʼಜೋಹೋʼ ವು ಇದೀಗ ತನ್ನ ಉದ್ಯೋಗಿಗಳನ್ನು ಹೆಚ್ಚಿಸಿಕೊಳ್ಳುವತ್ತ ಎದುರು ನೋಡುತ್ತಿದ್ದು 2,000 ಹೊಸ ಉದ್ಯೋಗಿಗಳನ್ನು ನೇಮಿಸಕೊಳ್ಳಲು ಮುಂದಾಗಿದೆ.

ಈಗಿರುವ ದೇಶಗಳನ್ನು ಬಿಟ್ಟು ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ ಗಳಲ್ಲಿ ಹೆಚ್ಚಿನದಾಗಿ ವಿಸ್ತರಿಸಲು ಕಂಪನಿಯು ಪ್ರಯತ್ನಿಸುತ್ತಿದ್ದು ಇದರ ಭಾಗವಾಗಿ ಇಂಜಿನಿಯರ್‌, ವಿನ್ಯಾಸಕಾರ, ಕಂಟೆಂಟ್‌, ಹಾಗೂ ಮಾರಾಟ ವಿಭಾಗಗಳಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ ಎಂದು ಕಂಪನಿಯ ಉತ್ಪನ್ನ, ತೆರಿಗೆ, ಲೆಕ್ಕಪತ್ರ ನಿರ್ವಹಣೆ ಮತ್ತು ವೇತನದ ಮುಖ್ಯಸ್ಥರಾಗಿರುವ ಪ್ರಶಾಂತ್‌ ಗಂಟಿ ಹೇಳಿದ್ದು “ಈಗಾಗಲೇ ನಾವು ಸ್ಥಳೀಯ ನೇಮಕಾತಿಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಈ ಪ್ರದೇಶದಲ್ಲಿನವರಿಗೆ ಕೌಶಲ್ಯ ವರ್ಧನೆಯ ಉದ್ದೇಶದಿಂದ ಜೋಹೋ ಸ್ಕೂಲ್‌ ಆಫ್‌ ಲರ್ನಿಂಗ್ ನಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಯೋಚಿಸಿದ್ದೇವೆ” ಎಂದು ವಿವರಣೆ ನೀಡಿದ್ದಾರೆ.

ಜೋಹೋ ಕಂಪನಿಯು ಪ್ರಸ್ತುತ ಅಮೆರಿಕ, ಹಾಗೂ ಭಾರತದಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ. ಇದಲ್ಲದೇ ಭಾರತದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಚಿಸುತ್ತಿದೆ, ಪ್ರಸ್ತುತ 10,800 ಉದ್ಯೋಗಿಗಳಿದ್ದು, ತನ್ನ ಸಂಪ್ರದಾಯದಂತೆ ಉತ್ತರ ಪ್ರದೇಶದ ಶ್ರೇಣಿ-3 ಹಾಗೂ ಶ್ರೇಣಿ-4ರ ಪಟ್ಟಣಗಳಲ್ಲಿ ಸೂಕ್ತವಾದ ಸ್ಥಳವನ್ನು ಹುಡುಕುತ್ತಿದೆ ಎನ್ನಲಾಗಿದೆ.

“ನಗರ ಪ್ರದೇಶಗಳಲ್ಲಿರುವ ಹೆಚ್ಚಿನ ಪ್ರತಿಭೆಗಳು ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಂದ ಬಂದವರು. ಕಂಪನಿಗಳು ಪ್ರತಿಭೆ ಇರುವಲ್ಲಿಗೆ ಅವಕಾಶಗಳನ್ನು ಪಡೆದುಕೊಳ್ಳಬೇಕು ಮತ್ತು ಉನ್ನತಿಯಲ್ಲಿ ಹೂಡಿಕೆ ಮಾಡಬೇಕು” ಎನ್ನುತ್ತಾರೆ ಗಂಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!