TRENDING | ದಾರಿಯಲ್ಲಿ ಎಲ್ಲರ ಹುಬ್ಬೇರಿಸಿದಳು ಲಾರಿ ಚಲಾಯಿಸಿದ ಈ ನಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ತನ್ನ ಚಾಪು ಮೂಡಿಸಿದ್ದಾಳೆ. ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇಂದು ಕಾಲಿಡದ ಕ್ಷೇತ್ರವಿಲ್ಲ. ಮಹಿಳೆ ಇಂದು ಕುಟುಂಬ ಹಾಗೂ ವೃತ್ತಿ ಎರಡನ್ನು ಸಮವಾಗಿ ನಿಭಾಯಿಸುತ್ತಿದ್ದಾರೆ. ಇದಕ್ಕೀಗ ಮತ್ತೊಂದು ಉದಾಹರಣೆ ತಮಿಳುನಾಡಿನ ಈ ಮಹಿಳೆ.

ಹೌದು, ಸಾಮಾನ್ಯವಾಗಿ ಟ್ರಕ್‌ಗಳನ್ನು ಗಂಡಸರೇ ಹೆಚ್ಚಾಗಿ ಓಡಿಸುವುದು ಕಾಣುತ್ತೇವೆ. ಆದರೆ ಇಲ್ಲಿಮಹಿಳೆಯೊಬ್ಬರು ಭಾರಿ ಗಾತ್ರದ ಟ್ರಕ್‌ ಓಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಗಟ್ಟಿತನಕ್ಕೆ ಶಹಭಾಷ್ ಎನ್ನುತ್ತಿದ್ದಾರೆ.

ಛತ್ತೀಸ್‌ಗಡ್‌ ಕೇಡಾರ್‌ನ ಐಎಎಸ್‌ ಅಧಿಕಾರಿ ಅವನೀಶ್ ಶರಣ್‌ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಹಿಳೆಯ ಇರಲಿ ಪುರುಷನೇ ಇರಲಿ ಟ್ರಕ್ ಚಿಂತೆ ಮಾಡಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

ತಮಿಳುನಾಡಿನ ನಂಬರ್ ಪ್ಲೇಟ್ ಹೊಂದಿರುವ ಟ್ರಕ್ ಹೆದ್ದಾರಿಯಲ್ಲಿ ವೇಗವಾಗಿ ಚಲಾಯಿಸುತ್ತಿದ್ದಾರೆ. ಇತ್ತ ವೀಡಿಯೊವನ್ನು ಚಿತ್ರೀಕರಿಸುವ ವ್ಯಕ್ತಿಯತ್ತ ಮಹಿಳಾ ಚಾಲಕಿ ನಗುಬೀರಿ ಮುಂದೆ ಸಾಗುತ್ತಾರೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ಮಹಿಳೆಯ ಧೈರ್ಯ ಹಾಗೂ ವಿಶ್ವಾಸ ತುಂಬಿದ ನಗುವನ್ನು ಕೊಂಡಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!