March 10, 2026
Tuesday, March 10, 2026
spot_img

4 ರೈಲು ನಿಲ್ದಾಣಗಳಿಗೆ ಸಂತರ ಹೆಸರು: ಕೇಂದ್ರಕ್ಕೆ ರಾಜ್ಯ ಸರಕಾರ ಸರ್ಕಾರ ಶಿಫಾರಸ್ಸು

ಹೊಸದಿಗಂತ ಡಿಜಿಟಲ್ ಡೆಸ್ಕ್:


ರಾಜ್ಯದ ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿರುವ ಸೂರಗೊಂಡನಕೊಪ್ಪ ರೈಲು ನಿಲ್ದಾಣಗಳನ್ನು ಸ್ಥಳೀಯ ಸಾಂಸ್ಕೃತಿಕ ಮಹತ್ವಕ್ಕೆ ಪೂರಕವಾಗಿ ಬದಲಿಸಿ, ಹೊಸ ನಾಮಕರಣ ಮಾಡಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಶಿಫಾರಸು ಮಾಡಿದ್ದು, ಈ ಸಂಬಂಧವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ರೈಲು ನಿಲ್ದಾಣ, ಬೆಳಗಾವಿ ನಿಲ್ದಾಣಕ್ಕೆ ಶ್ರೀ ಬಸವ ಮಹಾಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಚನ್ನಬಸವ ಪಟ್ಟದ್ದೇವರು ಮತ್ತು ಸೂರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ ಎಂದು ಹೊಸ ಹೆಸರುಗಳಿಡಬೇಕು ಎಂದು ಅವರು ಪ್ರಸ್ತಾಪಿಸಿದ್ದಾರೆ.

ಈ ನಾಲ್ಕು ನಿಲ್ದಾಣಗಳಿಗೆ ಸಂತರ ಹೆಸರಿಡಲು ಶಿಫಾರಸು ಮಾಡಿದ್ದು, ಅದಕ್ಕೆ ಗೃಹ ಸಚಿವಾಲಯದ ಒಪ್ಪಿಗೆ ಬೇಕಾಗಿದೆ. ಹೀಗಾಗಿ ಮೂಲಸೌಕರ್ಯ ಇಲಾಖೆ ಮೂಲಕ ಪತ್ರ ರವಾನೆ ಮಾಡಲಾಗಿದೆ‌ ಎಂದು ಅವರು ವಿವರಿಸಿದರು.

ಕರ್ನಾಟಕದ ಈ ಭಾಗಗಳಿಗೆ ತಾವು ಸೂಚಿಸಿರುವ ಸಂತರ ಕೊಡುಗೆ ಮೌಲಿಕವಾಗಿದೆ. ಈ ಶಿಫಾರಸನ್ನು ಅಂಗೀಕರಿಸಿ, ಮರುನಾಮಕರಣದ ಸಂಗತಿಯನ್ನು ಆದಷ್ಟು ಬೇಗ ರಾಜ್ಯಪತ್ರದಲ್ಲಿ ಪ್ರಕಟಿಸಬೇಕು ಎಂದು ಸಚಿವ ಎಂ.ಬಿ. ಪಾಟೀಲ್ ಕೋರಿದ್ದಾರೆ. ‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !