ರಾಜ್ಯ ಸರ್ಕಾರದಿಂದ ಮತ್ತೊಂದು ಯಡವಟ್ಟು: ‘ದಸರಾ ಕಾರ್ಯಸೂಚಿ’ಯಲ್ಲಿ ಹಳೆ ದಿನಾಂಕ ಪ್ರಿಂಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ಕ್ಕೆ ದಿನಾಂಕ ನಿಗದಿ ಪಡಿಸಲಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿಯ ಸಭೆಯ ಪತ್ರಿಕೆಯಲ್ಲಿ ಯಡವಟ್ಟು ಬಟಾಬಯಲಾಗಿದೆ.

ಈಗಾಗಲೇ ಸರ್ಕಾರಿ ಕಚೇರಿಗಳಲ್ಲಿ ಪೋಟೋ, ವೀಡಿಯೋ ಚಿತ್ರೀಕರಣ ಮಾಡದಂತೆ ರಾತ್ರೋ ರಾತ್ರಿ ಹೊರಡಿಸಿದಂತ ಆದೇಶದಲ್ಲಿ ಕನ್ನಡದ ಕಗ್ಗೊಲೆಯನ್ನು ಮಾಡಲಾಗಿತ್ತು.

ಈ ಯಡವಟ್ಟಿನ ಬೆನ್ನಲ್ಲೇ, ಇಂದು ಮೈಸೂರು ದಸರಾ ಮಹೋತ್ಸವ-2022ರ ಉನ್ನತ ಮಟ್ಟದ ಸಮಿತಿ ಸಭೆಯ ಪತ್ರಿಕೆಯಲ್ಲಿ ದಿನಾಂಕವನ್ನೇ ತಪ್ಪಾಗಿದೆ. ಮೈಸೂರು ದಸರಾ ಮಹೋತ್ಸವ ಕಾರ್ಯಸೂಚಿಯಲ್ಲಿ ದಿನಾಂಕ 19-07-2022 ಎಂಬುದಾಗಿ ಪ್ರಿಂಟ್ ಮಾಡಿಸೋ ಬದಲಾಗಿ ದಿನಾಂಕ 19-07-2021 ಹಾಕಿ ಯಡವಟ್ಟು ಮಾಡಿದ್ದು ಬಟಾಬಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!