ಆಹಾರದ ಮೇಲಿನ ಜಿಎಸ್‌ಟಿ ರಾಜ್ಯಗಳೊಂದಿಗೆ ಒಮ್ಮತದ ನಿರ್ಧಾರ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಿಎಸ್‌ಟಿ ವಿಧಿಸುವ ನಿರ್ಧಾರದ ಕುರಿತುಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದು, ಧಾನ್ಯಗಳು ಮತ್ತು ಬೇಳೆಕಾಳುಗಳು ಸೇರಿದಂತೆ ಪ್ಯಾಕ್ ಮಾಡಿದ ಆಹಾರ ಧಾನ್ಯಗಳ ಮೇಲೆ ಜಿಎಸ್‌ಟಿ ವಿಧಿಸುವ ನಿರ್ಧಾರ ರಾಜ್ಯಗಳೊಂದಿಗೆ ಒಮ್ಮತದಿಂದ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.

ಈ ಕುರೆಯಿತು ಸರಣಿ ಟ್ವೀಟ್‌ಗಳಲ್ಲಿ ಸ್ಪಷ್ಟಪಡಿಸಿದ ಅವರು, ಇಂತಹ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸುತ್ತಿರುವುದು ಇದೇ ಮೊದಲಾ? ಇಲ್ಲ. ಜಿಎಸ್‌ಟಿ-ಪೂರ್ವ ಆಡಳಿತದಲ್ಲಿ ರಾಜ್ಯಗಳು ಆಹಾರಧಾನ್ಯದಿಂದ ಗಮನಾರ್ಹ ಆದಾಯವನ್ನು ಸಂಗ್ರಹಿಸುತ್ತಿದ್ದವು. ಪಂಜಾಬ್ ಒಂದರಲ್ಲೇ ಖರೀದಿ ತೆರಿಗೆಯ ಮೂಲಕ ಆಹಾರ ಧಾನ್ಯದ ಮೇಲೆ 2,000 ಕೋಟಿ ರೂ.ಗೂ ಹೆಚ್ಚು ತೆರಿಗೆ ಸಂಗ್ರಹಿಸಿದೆ. ಯುಪಿ 700 ಕೋಟಿ ರೂ. ಸಂಗ್ರಹಿಸಿದೆ .

ಜೂನ್ 28ರಂದು ಚಂಡೀಗಢದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ನ 47 ನೇ ಸಭೆಯಲ್ಲಿ ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ತೆರಿಗೆ ಸೋರಿಕೆಯನ್ನು ತಡೆಯಲು ಈ ನಿರ್ಧಾರವು ಹೆಚ್ಚು ಅಗತ್ಯವಾಗಿದೆ .

ಈ ಬದಲಾವಣೆಗಳನ್ನು ಶಿಫಾರಸು ಮಾಡಿದ ಗ್ರೂಪ್ ಆಫ್ ಮೆಂಬರ್ಸ್ ಪಶ್ಚಿಮ ಬಂಗಾಳ, ರಾಜಸ್ಥಾನ, ಕೇರಳ, ಉತ್ತರ ಪ್ರದೇಶ, ಗೋವಾ , ಬಿಹಾರ ಮತ್ತು ಕರ್ನಾಟಕದ ಸಿಎಂ ರನ್ನು ಒಳಗೊಂಡಿತ್ತು. ತೆರಿಗೆ ಸೋರಿಕೆಯನ್ನು ಗಣನೆಗೆ ತೆಗೆದುಕೊಂಡು ಈ ಪ್ರಸ್ತಾಪವನ್ನು ಎಚ್ಚರಿಕೆಯಿಂದ ಪರಿಗಣಿಸಿದೆ. ಇದು ಜಿಎಸ್‌ಟಿ ಕೌನ್ಸಿಲ್‌ನ ಸರ್ವಾನುಮತದ ನಿರ್ಧಾರವಾಗಿದೆ ಎಂದಿದ್ದಾರೆ.

ಜೂನ್ 28 ರ ಸಭೆಯಲ್ಲಿ ಹಾಜರಿದ್ದ ಎಲ್ಲಾ ರಾಜ್ಯಗಳು-ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳಿಗೆ ಸಮ್ಮತಿಸಿ ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಜೆಪಿಯೇತರ ರಾಜ್ಯಗಳಾದ ಪಂಜಾಬ್, ಛತ್ತೀಸ್‌ಗಢ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ಕೂಡ ಈ ಕ್ರಮವನ್ನು ಬೆಂಬಲಿಸಿವೆ.

ಜಿಎಸ್‌ಟಿ ಕೌನ್ಸಿಲ್‌ನ ‘ಪ್ರೀ-ಪ್ಯಾಕ್ಡ್ ಮತ್ತು ಪ್ರಿ-ಲೇಬಲ್’ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸುವ ನಿರ್ಧಾರವು ಈ ಸರಕುಗಳ ಮೇಲೆ ಜಿಎಸ್‌ಟಿ ಹೇರುವ ವಿಧಾನಗಳಲ್ಲಿ ಬದಲಾವಣೆಯಾಗಿದೆ ಆದರೆ 2-3 ಐಟಂಗಳನ್ನು ಹೊರತುಪಡಿಸಿ ತೆರಿಗೆ ನಿವ್ವಳ ವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ.

ಪ್ಯಾಕ್​ ಆದ ಆಹಾರ ಉತ್ಪನ್ನಗಳು ಮತ್ತು ಲೇಬಲ್​ ಮಾಡಿದ ವಸ್ತುಗಳ ಮೇಲೆ ಶೇಕಡಾ 5 ರಷ್ಟು ತೆರಿಗೆ ವಿಧಿಸುವ ನಿರ್ಧಾರದ ನಂತರ ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಹೆಚ್ಚುತ್ತಿರುವ ಕಳವಳದ ನಡುವೆ ಹಣಕಾಸು ಸಚಿವರು ಸ್ಪಷ್ಟೀಕರಣ ನೀಡಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!