ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಗಳಲ್ಲಿ ನವಜಾತ ಶಿಶುವೊಂದು ತಾಯಿ ಜೊತೆ ಸಂಸ್ಕೃತ ಶ್ಲೋಕ ಪಠಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, . ಇದನ್ನ ನೋಡಿರುವ ನೆಟ್ಟಿಗರು ಫಿದಾ ಆಗಿದ್ದು, ಇದು ಕಲಿಯುಗದ ಅಭಿಮನ್ಯು ಎಂದು ಕರೆಯುತ್ತಿದ್ದಾರೆ.
ಈ ಅದ್ಭುತ ವಿಡಿಯೋ ತುಣುಕೊಂದನ್ನು ಐಪಿಎಸ್ ಅಧಿಕಾರಿ ರಾಜೇಶ್ ಹಿಂಗಾಂಕರ್ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಮಗು ಸ್ಪಷ್ಟವಾಗಿ ಸಂಸ್ಕೃತ ಶ್ಲೋಕ ಉಚ್ಚರಿಸುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ ಇದನ್ನ ಕಲಿತಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಈ ವಿಡಿಯೋ ಸಾವಿರಾರು ಜನರಿಂದ ವೀಕ್ಷಣೆಗೊಳಗಾಗಿದ್ದು, ಅನೇಕ ರೀತಿಯ ಅಭಿಪ್ರಾಯ ಸಹ ಹಂಚಿಕೊಂಡಿದ್ದಾರೆ. ಕೆಲವರು ಮಗುವನ್ನ ಕಲಿಯುಗದ ಅಭಿಮನ್ಯು ಎಂದು ಕರೆದಿದ್ದಾರೆ.
किसी को यदि अभिमन्यु द्वारा अपनी मां के गर्भ में सीखी हुई चक्रव्यूह भेदन की विघा पर विश्वास न हो तो ये कलयुग में विडियो अवश्य देंखे। पुंसवन संस्कार का महत्व क्या है। pic.twitter.com/hNCHF8Cq0H
— Rajesh Hingankar IPS (@RajeshHinganka2) July 21, 2022
ಹಿಂದು ಧರ್ಮದಲ್ಲಿ ಯಾವುದೇ ಮಗುವಿಗೆ 16 ಸಂಸ್ಕಾರಗಳನ್ನು ಪೂರ್ಣಗೊಳಿಸುವ ನಂಬಿಕೆ ಇದೆ. ಅವುಗಳಲ್ಲಿ ಒಂದು ಪುಂಸವನ ( ಸೀಮಂತ) ಸಂಸ್ಕಾರ. ಮಗುವಿನ 3 ತಿಂಗಳ ವಯಸ್ಸನ್ನು ಪೂರ್ಣಗೊಳಿಸಿದ ನಂತರ ಮಗುವಿನ ಪೋಷಕರು ಇದನ್ನು ಮಾಡುತ್ತಾರೆ. ಆರೋಗ್ಯವಂತ ಮಗುವಿನ ಪ್ರಾಪ್ತಿಗಾಗಿ ಇದನ್ನು ಮಾಡಲಾಗುತ್ತದೆ ಮತ್ತು ಮಹಿಳೆಯು ಮಗುವಿನೊಂದಿಗೆ ಮಾತನಾಡುವ ಈ ಮಂತ್ರವನ್ನು ತಾಯಿಯು ಪುಂಸವನ ಸಂಸ್ಕಾರದಲ್ಲಿ ಕೇಳುತ್ತಾಳೆ ಇದರಿಂದ ಮಗು ಅದನ್ನು ಕಲಿಯಬಹುದು ಎನ್ನುತ್ತಾರೆ.
ಈ ವೀಡಿಯೋ ನೋಡಿದ ನಂತರ ಜನರು ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ರೀಟ್ವೀಟ್ ಕೂಡ ಮಾಡುತ್ತಿದ್ದಾರೆ. ಮಹಾಭಾರತದ ಚಕ್ರವ್ಯೂಹವನ್ನು ಒಡೆಯುವ ಅಭಿಮನ್ಯುವಿನ ಕಲೆಯ ಲಿಂಕ್ನಂತೆ ಈ ವೀಡಿಯೊವನ್ನು ನೋಡಲಾಗುತ್ತಿದೆ.