ಹೊಸದಿಗಂತ ವರದಿ ಉತ್ತರಕನ್ನಡ:
ಜೇನು ತುಪ್ಪದ ಬಾಟಲಿ ಎಂದು ತಿಳಿದು, ಬಾಲಕನೊಬ್ಬ ಕಳೆನಾಶಕ ಸೇವಿಸಿದ ಘಟನೆ ಮುಂಡಗೋಡ ತಾಲೂಕಿನ ಚಿಟಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ವಿಠಲ ಬಾಬು ಕಾಳೆ (13) ಎಂಬ ಬಾಲಕ ತೀವ್ರ ಅಸ್ವಸ್ಥಗೊಂಡು, ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜೇನು ತುಪ್ಪವೆಂದು ತಿಳಿದು ಜೇನು ತುಪ್ಪದ ಬಾಟಲಿ ಪಕ್ಕದಲ್ಲಿ ಇದ್ದ ಕಳೆನಾಶಕ ಸೇವಿಸಿದ್ದಾನೆ. ಅಸ್ವಸ್ಥಗೊಂಡವನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.