ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತದ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿಕೆಟ್ 6 ನಷ್ಟಕ್ಕೆ 311 ಗಳಿಸಿದ್ದು, ಈ ಮೂಲಕ ಟೀಮ್ ಇಂಡಿಯಾ ಗೆಲುವಿಗೆ 312 ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡ ವೆಸ್ಟ್ ಇಂಡೀಸ್ ತಂಡ ಸಿಕ್ಕ ಉತ್ತಮ ಆರಂಭದ ಲಾಭ ಪಡೆದು ಬೃಹತ್ ಮೊತ್ತದ ಕಡೆಗೆ ಮುಖ ಮಾಡಿತು. ವಿಂಡೀಸ್ ಓಪನರ್ ಶೇಯ್ ಹೋಪ್ ಶತಕದ ಮೂಲಕ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ಇದು ಅವರ ಒಡಿಐ ಕೆರಿಯರ್‌ನ 13ನೇ ಶತಕವಾಗಿದೆ.
ಓಪನರ್ ಕೈಲ್ ಮೇಯರ್ಸ್ 23 ಎಸೆತಗಳಲ್ಲಿ 39 ರನ್‌ಗಳ ಕೊಡುಗೆ ಕೊಟ್ಟರೆ, ಶಾಮ್ರಾ ಬ್ರೂಕ್ಸ್ (35) ಮತ್ತು ಬ್ರಾಂಡನ್ ಕಿಂಗ್ (೦) , ನಿಕೋಲಸ್ ಪೂರನ್ (74) ರೋವ್ಮನ್ ಪೊವೆಲ್ (15) ರನ್ ಗಳಿಸಿದರು.
ಅಂತಿಮವಾಗಿ ಶೇಯ್ ಹೋಪ್ ಹಾಗು ರೊಮಾರಿಯೊ ಶೆಫರ್ಡ್ ಜೊತೆ ಸೇರಿ ತಂಡದ ಮೊತ್ತವನ್ನು 300 ಗಡಿ ದಾಟಿಸಿದರು. ಕೊನೆಯ ಓವರ್ ಮುನ್ನ 115 ರನ್ ಗೆ ಹೋಪ್ ಔಟಾದರು. ಅಂತಿಮವಾಗಿ 50 ಓವರ್ ಗೆ 311 ರನ್ ಗಳಿಸಿದರು.
ಭಾರತ ಪರ ಶಾರ್ದುಲ್ ಠಾಕೂರ್ ಮೂರು ವಿಕೆಟ್, ದೀಪಕ್ ಹೂಡ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್ ತಲಾ ಒಂದು ಒಂದು ವಿಕೆಟ್ ಪಡೆದರು.