ಹೊಸದಿಗಂತ ಡಿಜಿಟಲ್ ಡೆಸ್ಕ್
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಇಂದಿನ ವಿಚಾರಣೆ ಅಂತ್ಯವಾಗಿದ್ದು, ನಾಳೆ ಮತ್ತೆ ಬರಲು ಸೂಚನೆ ನೀಡಲಾಗಿದೆ.
ಇಂದು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಇಡಿ ಮತ್ತೆ ನಾಳೆ ನಾಳೆ ಅಂದರೆ ಬುಧವಾರ ಮತ್ತೆ ವಿಚಾರಣೆಗೆ ಕರೆದಿದೆ.
ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ವಿದ್ಯುತ್ ಲೇನ್ನಲ್ಲಿರುವ ಇಡಿ ಕಚೇರಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ಜತೆ ಆಗಮಿಸಿದ್ದರು.
ಇದಾದ ಬಳಿಕ ಇಡಿ ಕಚೇರಿಯಿಂದ ಅರ್ಧಕ್ಕೆ ಊಟಕ್ಕೆ ತೆರಳಿದ್ದ ಸೋನಿಯಾ ಗಾಂಧಿ, ಮಧ್ಯಾಹ್ನ 3.30ರ ಸುಮಾರಿಗೆ ವಾಪಸ್ ಬಂದಿದ್ದಾರೆ.
ಜುಲೈ 21ರಂದು ಸೋನಿಯಾ ಮೊದಲ ಬಾರಿಗೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ನಂತರ ಏಜೆನ್ಸಿಯ 28 ಪ್ರಶ್ನೆಗಳಿಗೆ ಉತ್ತರಿಸಿದರು ಎನ್ನಲಾಗ್ತಿದೆ.