ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಹೊಸ ಆತಂಕ ಮೂಡಿಸಿರುವ ಮಂಕೀ ಪಾಕ್ಸ್ ಪ್ರಕರಣ ಪತ್ತೆಗೆ ಆರ್‌ಟಿಪಿಸಿಆರ್ ಆಧರಿತ ಕಿಟ್ ಬಿಡುಗಡೆಯಾಗಿದೆ.
ಜೀನ್ಸ್2ಮಿ ಪ್ರೈವೇಟ್ ಲಿಮಿಟೆಡ್ ಕಂಪನಿ ಕಿಟ್ ಬಿಡುಗಡೆ ಮಾಡಿದ್ದು, 50 ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಸೋಂಕು ಪತ್ತೆ ಮಾಡಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಬಗ್ಗೆ ಮಾತನಾಡಿರುವ ಕಂಪನಿಯ ಸಿಇಒ ನೀರಜ್ ಗುಪ್ತಾ, ಕಿಟ್‌ಗಳು ಗರಿಷ್ಠ ಮಟ್ಟದ ನಿಖರ ಫಲಿತಾಂಶ ನೀಡುತ್ತವೆ ಎಂದು ಹೇಳಿದ್ದಾರೆ. ಕಂಪನಿ ಸಾಮಾನ್ಯವಾಗಿ ಬಳಸಬಹುದಾದ ಪಿಸಿಆರ್ ಆಧಾರಿತ ಕಿಟ್ ಹಾಗೂ ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು, ಡಯಾಗ್ನೊಸ್ಟಿಕ್ ಕೇಂದ್ರಗಳು, ಪ್ರಯೋಗಾಲಯಗಳು, ಆರೋಗ್ಯ ಶಿಬಿರಗಳಲ್ಲಿ ಬಳಸಬಹುದಾದ ಕಿಟ್‌ಗಳು ಎಂಬ ಎರಡು ವಿಧದ ಕಿಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಮಾನವ ದೇಹದಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಗೆ ಬಳಸುವ ಸಾಧನಗಳ ತಯಾರಿಕೆಯಲ್ಲಿ ಜೀನ್ಸ್೨ಮಿ ಮುಂಚೂಣಿಯಲ್ಲಿದೆ.