ಹೊಸದಿಗಂತ ವರದಿ, ಉಡುಪಿ:
ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳಿಂದ ಹತ್ಯೆ ವಿರುದ್ಧ ಬಿಜೆಪಿಯ ನಿಲುವಿನ ಕುರಿತು ಅಸಮಾಧಾನ ಹೊರಹಾಕಿ ಬಿಜೆಪಿ ಕೋಟ ಯುವಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಸುಶಾಂತ್ ಶೆಟ್ಟಿ ರಾಜೀನಾಮೆ ಘೋಷಿಸಿದ್ದಾರೆ.
ಸಚಿವ ಶ್ರೀನಿವಾಸ ಪೂಜಾರಿಯವರ ಕ್ಷೇತ್ರದಲ್ಲಿ ಯುವ ಸಂಘಟಕ, ಕೋಟ ಯುವಮೊರ್ಚಾ ಅಧ್ಯಕ್ಷರಾಗಿದ್ದ ಅವರು, ಉತ್ತಮ ಸಂಘಟಕರಾಗಿದ್ದರು. ಹತ್ಯೆಯಿಂದ ಮನನೊಂದು ತನ್ನ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ್ ನೆಟ್ಟಾರು ಹತ್ಯೆ: ಕೋಟ ಯುವಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಸುಶಾಂತ್ ಶೆಟ್ಟಿ ರಾಜೀನಾಮೆ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಪಕ್ಷ ಹಾಗೂ ಸಂಘಟನೆಗಾಗಿ ಕೆಲಸ ಮಾಡುತ್ತಿರುವರನ್ನು ಕೊಲೆ ಮಾಡುತ್ತಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ರಾಜ್ಯ ಸರ್ಕಾರವು ಕಠಿಣ ಕ್ರಮ ಎಂಬ ಪೊಳ್ಳು ಭರವಸೆ ನೀಡಿ ಆರೋಪಿಗಳನ್ನು ಬಂಧಿಸಿದಂತೆ ಮಾಡಿದರೂ ಕೂಡ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ. ಹಿಂದೆ ಹಲವರು.ಇಂದು ಪ್ರವೀಣ್…ನಾಳೆಯ ಸಾಲಿನಲ್ಲಿ ನಮ್ಮ ಸಹಿತ ಮತ್ತೊಬ್ಬರು ಎನ್ನುವಂತಾಗಿದೆ. ನಿರಂತರವಾಗಿ ನೋವು ಪಡುತ್ತಿದ್ದೇವೆ. ಅದಕ್ಕಾಗಿ ಈ ಪ್ರವೀಣ್ ನೆಟ್ಟಾರು ಹತ್ಯೆ: ಕೋಟ ಯುವಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಸುಶಾಂತ್ ಶೆಟ್ಟಿ ರಾಜೀನಾಮೆ ತೀರ್ಮಾನ ಅವರು ಹೇಳಿದ್ದಾರೆ.