ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾರ್ಟಿ, ಕೆಲಸ, ಮಕ್ಕಳು ಶಾಲೆಗೆ ಹೋಗುವಾಗ ಕೆಲವರು ರಾತ್ರಿ ಮಲಗುವಾಗ ಕೂಡ ಸೆಂಟ್ ಇಲ್ಲದೆ ನಿದ್ದೆ ಮಾಡುವುದಿಲ್ಲ. ಆದರೆ ಇದರ ಬಳಕೆಯಲ್ಲಿ ಎಚ್ಚರವಿರಲಿ, ಸುವಾಸನೆ ಅಂತ ಹೆಚ್ಚಾಗಿ ಬಳಸಿದರೆ ಆ ವಾಸನೆಯು ಇತರರನ್ನು ಕಾಡಬಹುದು. ಸೀನುವಿಕೆ, ತಲೆನೋವಿನಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
ಕೇಂದ್ರೀಕೃತ ಸುಗಂಧ ದ್ರವ್ಯಗಳು ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಸುಗಂಧ ದ್ರವ್ಯದ ಹೊಗೆಯಲ್ಲಿ ಎಥೆನಾಲ್ ಇರುತ್ತದೆ. ಇದು ಮಕ್ಕಳ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಪರ್ಫ್ಯೂಮ್ ಖರೀದಿಸುವ ಮೊದಲು, ನಿಮಗೆ ಯಾವುದೇ ಅಲರ್ಜಿ ಇದೆಯೇ ಎಂದು ಪರಿಶೀಲಿಸಿ. ಅಲರ್ಜಿ ಇದ್ದರೆ ನಿಮ್ಮ ಚರ್ಮವು ಕಜ್ಜಿ, ತುರಿಕೆ ಉಂಟಾಗುತ್ತದೆ. ಮೂಗು, ಕಣ್ಣು, ಗಂಟಲು ಬೇನೆ, ಮರೆವು, ಉಸಿರಾಟದ ಕಾಯಿಲೆಗಳು ಬರುತ್ತವೆ.
ಸುಗಂಧ ದ್ರವ್ಯದಲ್ಲಿರುವ ರಾಸಾಯನಿಕಗಳು ಪುರುಷರ ಲೈಂಗಿಕ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತವೆ ಎಂಬುದು ಹಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ತಲೆತಿರುಗುವಿಕೆ, ದದ್ದು, ಗೊಂದಲ, ಅರೆನಿದ್ರಾವಸ್ಥೆ, ವಾಂತಿ, ಹೃದಯ ಬಡಿತದಲ್ಲಿನ ಬದಲಾವಣೆಗಳನ್ನು ಗಮನಿಸಬಹುದು. ದೀರ್ಘಾವಧಿಯಲ್ಲಿ ಇದು ಉಸಿರಾಟದ ವ್ಯವಸ್ಥೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು ಮತ್ತು ಗೊರಕೆ, ಹಾರ್ಮೋನ್ ಅಸಮತೋಲನ ಮತ್ತು ಆಸ್ತಮಾದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.