ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕುರಿತು ಮಾಸ್ ಹೀರೋ ವಿಜಯ್ ದೇವರಕೊಂಡ ಮಾಡಿರುವ ಕಮೆಂಟ್ಸ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇಬ್ಬರೂ ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ನಟಿಸಿದ್ದು, ದೇಶದ್ಯಾಂತ ಇಬ್ಬರಿಗೂ ಹೆಚ್ಚಿನ ಫ್ಯಾನ್ ಫಾಲೋಯಿಂಗ್ ಇದೆ.
ಇತ್ತೀಚೆಗಷ್ಟೇ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ರಶ್ಮಿಕಾ ನನ್ನ ಸ್ನೇಹಿತೆ, ನನ್ನ ಡಾರ್ಲಿಂಗ್, ಅವರೆಂದರೆ ನನಗೆ ತುಂಬಾ ಇಷ್ಟ ಎಂದಿದ್ದ ದೇವರಕೊಂಡ ಇದೀಗ ಮತ್ತೊಮ್ಮೆ ರಶ್ಮಿಕಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ನಟನೆಯ ಸೀತಾರಾಮಂ ಈವೆಂಟ್ ಆಯೋಜಿಸಲಾಗಿತ್ತು. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದು, ಆಗಸ್ಟ್ 5 ರಂದು ಚಿತ್ರ ತೆರೆಗೆ ಬರಲಿದೆ.
ಚಿತ್ರದ ಪ್ರಚಾರದ ಅಂಗವಾಗಿ ʻಸೀತಾರಾಮಂ ಸ್ವರಾಲುʼ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದ ವಿಜಯ್ ದೇವರಕೊಂಡ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. “ರಶ್ಮಿಕಾ, ಯಾವಾಗಲೂ ತುಂಬಾ ಸುಂದರವಾಗಿ ಕಾಣುತ್ತಾರೆ, ನಾನು ಅವರ ಹೆಸರನ್ನು ಹೇಳಿದ ಕೂಡಲೇ ಎಲ್ಲರೂ ಮುಗುಳ್ನಗುತ್ತಾರೆ ಅದರ ಕಾರಣ ನನಗೂ ತಿಳಿದಿಲ್ಲ” ಎಂದ ಕೂಡಲೇ ರಶ್ಮಿಕಾ ಮಂದಣ್ಣ ಕೆನ್ನೆ ಕೆಂಪಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಜನಪ್ರಿಯ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.