ಹೊಸದಿಗಂತ ವರದಿ, ವಿಜಯಪುರ
ಜಿಲ್ಲೆಯ ತಾಳಿಕೋಟೆ ಸಮೀಪ ಡೋಣಿ ನದಿ ಉಕ್ಕೇರಿ ಹರಿಯುತ್ತಿದ್ದು ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಮುಳುಗಡೆಯಾಗಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ.
ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಇಲ್ಲಿನ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ರಾಜ್ಯ ಹೆದ್ದಾರಿ 61 ರ ಮನಗೂಳಿ- ದೇವಾಪುರ ಕ್ರಾಸ್ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇಲ್ಲಿನ ಡೋಣಿ ನದಿಗೆ ಪರ್ಯಾಯ ಮಾರ್ಗವಾಗಿ ನಿರ್ಮಿಸುತ್ತಿರುವ ಸೇತುವೆ ಇನ್ನು ನಿರ್ಮಾಣ ಹಂತದಲ್ಲಿದ್ದು, ಸಧ್ಯ ಈ ಸೇತುವೆ ಮೂಲಕ ವಾಹನಗಳನ್ನು ಬಿಡಲಾಗುತ್ತಿದೆ. ಈ ವಿಚಾರ ಸಾಲುಗಟ್ಟಿ ನಿಂತ ವಾಹನ ಚಾಲಕರಲ್ಲಿ ಕೊಂಚ ಸಮಾಧಾನ ಮೂಡಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ