ಕಾರಿನ ಕಿಟಕಿಯಿಂದ ನಡು ರಸ್ತೆಗೆ ಬಿದ್ದ ಮಗು: ವೀಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಗ್ನಲ್‌ನಲ್ಲಿ ನಿಂತಿದ್ದ ಕಾರಿನ ಕಿಟಕಿಯಿಂದ ಮಗು ರಸ್ತೆ ಮೇಲೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಚೀನಾದ ನಿಂಗ್ಬೋ ನಗರದ ಸಿಗ್ನಲ್‌ನಲ್ಲಿ ನಿಂತಿದ್ದ ಕಾರೊಂದು ಗ್ರೀನ್‌ ಸಿಗ್ನಲ್‌ ಬೀಳುತ್ತಿದ್ದ ಕೂಡಲೇ ಮುಂದೆ ಸಾಗಿದೆ. ಈ ವೇಳೆ ಕಾರಿನ ಕಿಟಕಿಯಿಂದ ಆಚೆ ಇಣುಕಿ ನೋಡುತ್ತಿದ್ದ ಮಗು ನೆಲಕ್ಕೆ ಉರುಳಿದೆ. ಚಾಲಕ ಮಗು ಬಿದ್ದಿರುವುದನ್ನು ಗಮನಿಸದೆ ಅಲ್ಲೇ ಬಿಟ್ಟು ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಇದನ್ನು ಗಮನಿಸಿದ ಇತರೆ ವಾಹನಗಳ ಚಾಲಕರು ತಮ್ಮ ಕಾರುಗಳನ್ನು ನಿಲ್ಲಿಸಿ ಮಗುವನ್ನು ಕಾಪಾಡಿದ್ದಾರೆ.

ಘಟನೆಯಲ್ಲಿ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೀಡಿಯೋ ಸಖತ್‌ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!