ಹೊಸದಿಗಂತ ಡಿಜಿಟಲ್ ಡೆಸ್ಕ್
ʼದಿ ಎಡಿಟರ್ಸ್ ಗಿಲ್ಡ್ ಆಫ್ ಬೆಂಗಳೂರುʼ ನೂತನ ಅಧ್ಯಕ್ಷರಾಗಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ವಿಸ್ತಾರ ಮೀಡಿಯಾ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗಿಲ್ಡ್ ನ ನಿರ್ಗಮಿತ ಅಧ್ಯಕ್ಷರು ಹಾಗೂ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.
ʼವಿಸ್ತಾರ ನ್ಯೂಸ್ʼ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ʼಪ್ರಜಾವಾಣಿʼ ಸಂಪಾದಕರಾದ ರವೀಂದ್ರ ಐನಕೈ ಕಾರ್ಯದರ್ಶಿಯಾಗಿ, ʼವಿಜಯವಾಣಿʼ ಸಂಪಾದಕರಾದ ಕೆಎನ್ ಚೆನ್ನೇಗೌಡ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ. ʼಸಂಯುಕ್ತ ಕರ್ನಾಟಕʼ ಸಂಪಾದಕರಾದ ಹುಣಸವಾಡಿ ರಾಜನ್, ʼಹೊಸದಿಗಂತʼ ಸಮೂಹ ಸಂಪಾದಕರಾದ ವಿನಾಯಕ್ ಭಟ್ ಮೂರೂರು ಹಾಗೂ ʼಉದಯವಾಣಿʼ ಸಂಪಾದಕರಾದ ಬಿಕೆ ಗಣೇಶ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ