ಹೊಸದಿಗಂತ ವರದಿ ವಿಜಯಪುರ:
ಅಪಾಯ ಲೆಕ್ಕಿಸದೇ ಜಲಾವೃತವಾದ ಸೇತುವೆ ಮೇಲೆ ತೆರಳುತ್ತಿದ್ದ ಸರ್ಕಾರಿ ಬಸ್ ಕ್ಷಣಾರ್ಧದಲ್ಲಿ ಪಾರಾಗಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಬಳಿ ನಡೆದಿದೆ.
ಡೋಣಿ ಪ್ರವಾಹದಿಂದ ಇಲ್ಲಿನ ಸೇತುವೆ ಮೇಲೆ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಹತ್ತಾರು ಪ್ರಯಾಣಿಕರ ಸಮೇತ ಸೇತುವೆ ಮೇಲೆ ಚಾಲಕ ಬಸ್ಸನ್ನು ಚಲಾಯಿಸಿದ್ದಾನೆ. ಈ ವೇಳೆ ಬಸ್ ಏಕಾಏಕಿ ಸೇತುವೆ ಬಿಟ್ಟು ವಾಲಿದ್ದಂತಾಗಿ, ಅದೃಷ್ಟವಶಾತ್ ಪಾರಾಗಿದೆ. ಈ ಘಟನೆಯಿಂದ ಪ್ರಯಾಣಿಕರು ತೀವ್ರವಾಗಿ ಭಯಗೊಂಡಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ