ಡ್ರ್ಯಾಗನ್ ಇನ್ನಷ್ಟು ಗರಂ: ನ್ಯಾನ್ಸಿ ಪೆಲೋಸಿ ಕುಟುಂಬಕ್ಕೆ ನಿರ್ಬಂಧ ಹೇರಿದ ಚೀನಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೈವಾನ್‌ಗೆ ಭೇಟಿ ನೀಡಿದ ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿಗೆ ಚೀನಾ ವಿದೇಶಾಂಗ ಸಚಿವಾಲಯ ನಿರ್ಬಂಧ ಘೋಷಿಸಿದೆ.
ಚೀನಾದ ಆಂತರಿಕ ವ್ಯವಹಾರಗಳಲ್ಲಿ ಪೆಲೋಸಿ ಮಧ್ಯಪ್ರವೇಶಿಸುತ್ತಿದ್ದಾರೆ, ಜೊತೆಗೆ ಚೀನಾದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದಾರೆ ಈ ಹಿನ್ನಲೆಯಲ್ಲಿ ಪೆಲೋಸಿ ಹಾಗೂ ಅವರ ಕುಟುಂಬದ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

ಪೆಲೋಸಿ ತೈವಾನ್ ಭೇಟಿಯ ಬೆನ್ನಿಗೇ ಹಲವು ರಾಜಕೀಯ ಬೆಳವಣಿಗೆಗಳು ಹುಟ್ಟಿಕೊಂಡಿದ್ದು, ಕಳೆದ ಎರಡು ದಿನಗಳಿಂದ ತೈವಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಚೀನಾ ಸೇನಾ ತಾಲೀಮು ಆರಂಭಿಸಿದೆ. 100ಕ್ಕೂ ಅಧಿಕ ಯುದ್ಧ ವಿಮಾನ, 10ರಷ್ಟು ಯುದ್ಧನೌಕೆಗಳು ಈ ತಾಲೀಮಿನಲ್ಲಿ ಭಾಗವಹಿಸಿವೆ.

ಈ ನಡುವೆ ತೈವಾನ್ ಜಲಸಂಧಿಯಲ್ಲಿನ ಚೀನಾ ಮಿಲಿಟರಿ ಕಾರ್ಯಾಚರಣೆಯನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಇದು ತೈವಾನ್ ಜಲಸಂಧಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳುವ ದೀರ್ಘಾವಧಿಯ ಉದ್ದೇಶಕ್ಕೆ ವಿರುದ್ಧವಾದ ಕ್ರಮ ಎಂದು ಅಮೆರಿಕಾ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!