ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಬೆಳಿಗ್ಗೆ ಇಒಎಸ್-2 ಮತ್ತು ಆಜಾದಿ ಸ್ಯಾಟ್ ಉಪಗ್ರಹಗಳನ್ನು ಹೊತ್ತೊಯ್ದ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್ಎಸ್ಎಲ್ವಿ) ಉಡಾವಣೆಗೊಂಡ ಕೆಲವೇ ಗಂಟೆಗಳಲ್ಲೇ ಸಿಗ್ನಲ್ ಕಳೆದುಕೊಂಡು ಬೇರೆ ಕಕ್ಷೆ ಮೇಲೆ ಉಪಗ್ರಹಗಳನ್ನು ಇರಿಸಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಸಮಿತಿಯು ಸಮಸ್ಯೆಯನ್ನು ವಿಶ್ಲೇಷಿಸಿ ಕೆಲವೊಂದು ಶಿಫಾರಸುಗಳನ್ನು ಅನುಸರಿಸುವ ಮೂಲಕ ಇಸ್ರೋ ಶೀಘ್ರದಲ್ಲೇ SSLV-D2 ತಯಾರು ಮಾಡುವುದಾಗಿ ತಿಳಿಸಿದೆ. SSLV-D1 ಉಪಗ್ರಹಗಳನ್ನು ವೃತ್ತಾಕಾರದ ಕಕ್ಷೆ 356 ಬದಲಾಗಿ 356 ಕಿಮೀ x 76 ಕಿಮೀ ದೀರ್ಘವೃತ್ತದಲ್ಲಿ ಇರಿಸಿದೆ. ಹಾಗಾಗಿ ಈ ಉಪಗ್ರಹಗಳನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ. ಸಮಸ್ಯೆಯನ್ನು ಸಮಂಜಸವಾಗಿ ಗುರುತಿಸಲಾಗಿದ್ದು, ಸಿಗ್ನಲ್ ಕಳೆದಿಕೊಂಡಿರುವುದನ್ನು ಗುರುತಿಸುವಲ್ಲಿ ವಿಫಲತೆ ಉಂಟಾಗಿದ್ದರಿಂದ ಉಪಗ್ರಹ ಬೇರೆ ಕಕ್ಷೆಗೆ ಹೋಗಲು ಕಾರಣವಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
(1/2) SSLV-D1/EOS-02 Mission update: SSLV-D1 placed the satellites into 356 km x 76 km elliptical orbit instead of 356 km circular orbit. Satellites are no longer usable. Issue is reasonably identified. Failure of a logic to identify a sensor failure and go for a salvage action
— ISRO (@isro) August 7, 2022
ಬಾಹ್ಯಾಕಾಶ ಸಂಸ್ಥೆಯು ನಿರೀಕ್ಷಿಸಿದ ಕಕ್ಷೆಗಿಂತ ದೀರ್ಘ ಕಕ್ಷಗೆ ಉಪಗ್ರಹ ಉಡಾವಣೆಯಾಗಿದೆ. ಎಸ್ಎಸ್ಎಲ್ವಿ ಎಲ್ಲಾ ಹಂತಗಳಲ್ಲಿ ನಿರೀಕ್ಷಿಸಿದಂತೆಯೇ ಸಾಮಾನ್ಯವಾಗಿದ್ದವು. ಆದರೆ ಟರ್ಮಿನಲ್ ಹಂತದಲ್ಲಿ ಡೇಟಾ ಕಳೆದುಕೊಂಡು ನಷ್ಟ ಅನುಭವಿಸಿದೆ.