ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ವರ್ಕಾಡಿ ಪರಿಸರದಲ್ಲಿ ಕಟ್ಟಡವೊಂದು ಕಣ್ಣೆದುರಿಗೇ ಉರುಳಿಬಿದ್ದ ಆಘಾತಕಾರಿ ಘಟನೆ ಭಾನುವಾರ ಸಂಭವಿಸಿದೆ.
ವರ್ಕಾಡಿ ಸಮೀಪದ ಸುಂಕದಕಟ್ಟೆಯಲ್ಲಿನ ವಸತಿ ಕೊಠಡಿ, ವಾಣಿಜ್ಯ ಮಳಿಗೆ ಹೊಂದಿರುವ ಈ ಕಟ್ಟಡದಲ್ಲಿ ಕೆಲವು ದಿನಗಳ ಹಿಂದೆಯೇ ಬಿರುಕು ಕಾಣಿಸಿಕೊಂಡಿತ್ತು. ಈ ನಡುವೆ ಮಳೆಯ ಅಬ್ಬರವೂ ತೀವ್ರಗೊಂಡ ಹಿನ್ನಲೆಯಲ್ಲಿ ಕಟ್ಟಡ ನೆಲಸಮವಾಗಿದೆ. ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ ಎಂಬುದನ್ನು ಅರಿತ ಹಲವರು ಈ ಮೊದಲೇ ಸ್ಥಲಾಂತರಗೊಂಡಿದ್ದರು. ಅಲ್ಲದೆ ಕ್ಷಣ ಕ್ಷಣವೂ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಯಾವುದೇ ಜೀವಾಪಾಯ ಸಂಭವಿಸಿಲ್ಲ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ