Sunday, November 16, 2025

ಮಹಿಳೆಯರು ಉಚಿತ ಬಸ್ ನಲ್ಲಿ ಓಡಾಡುತ್ತಾರೆ, ಆದ್ರೆ ಕಾಂಗ್ರೆಸ್ ಗೆ ಮತ ಹಾಕಿಲ್ಲ: ಕೆ.ಎನ್ ರಾಜಣ್ಣ ಹೊಸ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಕಾಂಗ್ರೆಸ್ ಸರಕಾರದ 5 ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಬಸ್ ನಲ್ಲಿ ಉಚಿತವಾಗಿ ಓಡಾಡಲು ಶಕ್ತಿ ಯೋಜನೆ, ಜಾರಿ ಮಾಡಲಾಗಿದೆ ಆದರೆ ಮಹಿಳೆಯರು ಉಚಿತ ಬಸ್ ನಲ್ಲಿ ಓಡಾಡುತ್ತಾರೆ ಆದರೆ ಕಾಂಗ್ರೆಸ್ ಗೆ ಮತ ಹಾಕಿಲ್ಲ ಎಂದು ಶಾಸಕ ಕೆ ಎನ್ ರಾಜಣ್ಣ ಮತ್ತೊಂದು ಡ್ಯಾಮೇಜ್ ಹೇಳಿಕೆ ನೀಡಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಶಾಸಕ ಕೆ ಎನ್ ರಾಜಣ್ಣ ಮಾತನಾಡಿದ್ದು, ಉಚಿತ ಬಸ್ ನಲ್ಲಿ ಪ್ರಯಾಣಿಸಿದ ಮಹಿಳೆಯರು ಮತ ಹಾಕಿಲ್ಲ ಅವರು ಮತ ಹಾಕಿದ್ದರೆ, ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಸಿಗುತ್ತಿತ್ತು. ಲಕ್ಷ ಲಕ್ಷ ಸಂಬಳದವರು ಉಚಿತ ಬಸ್ ನಲ್ಲಿ ಸಂಚರಿಸಿದ್ದಾರೆ ಪುಕ್ಕಟೆ ಬಸ್ ನಲ್ಲಿ ಹೆಣ್ಣು ಮಕ್ಕಳು ಓಡಾಡುತ್ತಾರೆ. ಆದರೆ ಮತ ಹಾಕಿಲ್ಲವೆಂದು ಕೆ ಎನ್ ರಾಜಣ್ಣ ಹೇಳಿದ್ದಾರೆ.

error: Content is protected !!