ನನ್ನ ಮದುವೆಯಲ್ಲಿ ಊಟ ಮಾಡಿದವರೆಲ್ಲಾ ಬಿಲ್‌ ಕಟ್ಟಿ: ವಧುವಿನ ಪೋಸ್ಟರ್‌ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದಲ್ಲಿ ಮದುವೆ ಅಂದಾಕ್ಷಣ ಶಾಸ್ತ್ರ, ಸಂಪ್ರದಾಯದ ಜೊತೆಗೆ ನೆನಪಿಗೆ ಬರುವುದು ಅಲ್ಲಿ ಬಡಿಸುವ ಬಗೆ ಬಗೆಯ ಖಾದ್ಯಗಳು.  ಮದುವೆಗಳಲ್ಲಿ ಹಲವು ಬಗೆಯ ಆಹಾರ ಪದಾರ್ಥಗಳನ್ನು ಮಾಡಿ ಬಂಧು ಮಿತ್ರರನ್ನು ಕರೆಸಿ ಊಟ ಹಾಕುವುದು ಕಾಮನ್.‌ ಊಟವಾದ ಬಳಿಕ ಯಾರೂ ಬಿಲ್‌ ಪೇ ಮಾಡಿ ಎಂದೂ ಇದುವರೆಗೂ ಯಾರೂ ಕೇಳಿಲ್ಲ. ಆದರೆ, ಇದೀಗ ವೈರಲ್‌ ಆಗಿರುವ ಪೋಸ್ಟ್‌ನಲ್ಲಿ ವಧು ಊಟವಾದ ಬಳಿಕ ಬಿಲ್‌ ಪಾವತಿಸಿ ಎಂದು ಕೇಳಿದ್ದಾಳೆ.

ಆ ಯುವತಿ ತನಗೆ ಮದುವೆಯಾಗುವ ಆಸೆ ಇದೆ, ಆದರೆ ಬಂದವರಿಗೆ ಊಟ ಹಾಕವಷ್ಟು ಶಕ್ತಿ ನಮ್ಮ ಬಳಿ ಇಲ್ಲ. ಮದುವೆಗೆ ಬರುವವರು ಉಡುಗೊರೆಗಳ ಬದಲು, ಊಟವಾದ ನಂತರ ಊಟದ ಬಿಲ್ ಕೊಡಿ ಎಂದು ಪೋಸ್ಟ್‌ ಮಾಡಿದ್ದಾಳೆ. ಫೇಸ್‌ಬುಕ್‌ನಲ್ಲಿ ಆಕೆಯ ಪೋಸ್ಟ್‌ಗೆ ನೆಟಿಜನ್‌ಗಳು ಶಾಕ್‌ ಆಗಿದ್ದು, ಹಲವು ಕಮೆಂಟ್‌ಗಳನ್ನು ಮಾಡಿದ್ದಾರೆ. ಹುಡುಗಿಯ ಪೋಸ್ಟ್ ರೆಡ್ಡಿಟ್ ಗ್ರೂಪ್ ಆರ್/ವೆಡ್ಡಿಂಗ್‌ಶೇಮಿಂಗ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಯಾರಾದರೂ ಅತಿಥಿಗಳನ್ನು ಊಟದ ನಂತರ ಬಿಲ್ ಪಾವತಿ ಮಾಡುವಂತೆ ಕೇಳುತ್ತಾರೆಯೇ? ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಮದುವೆಯಲ್ಲಿ ಮಾಡಿದ ಊಟಕ್ಕೆ ಬಿಲ್‌ ಕೇಳುವುದು ಸಮಂಜಸವಲ್ಲ ಎಂದು ಒಬ್ಬರು. ನಾನು ನಿನಗೊಂದು ಸಲಹೆ ನೀಡುತ್ತೇನೆ, ನಿನ್ನ ಮದುವೆಗೆ 30 ಮಂದಿಯನ್ನು ಮಾತ್ರ ಆಹ್ವಾನಿಸಿ ಉಚಿತ ಊಟ ಕೊಡಿ’ ಎಂದಿದ್ದಾರೆ. ಬಗೆ ಬಗೆಯ ಕಮೆಂಟ್‌ಗಳೊಂದಿಗೆ ಪೋಸ್ಟ್ ವೈರಲ್ ಆಗುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!