ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಮನೆಗೆ ಎಫ್‌ಬಿಐ ಅಧಿಕಾರಿಗಳ ದಿಢೀರ್ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕ‌ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನೆಗೆ ಎಫ್ ಬಿಐ ( ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ದಾಳಿ ನಡೆಸಿದೆ. ತಮ್ಮ ಅಧಿಕಾರಾವಧಿಯ ಬಳಿಕವೂ ಟ್ರಂಪ್ ಕೆಲವೊಂದು ಗೌಪ್ಯ ದಾಖಲೆಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಾರೆ ಎಂಬ ಶಂಕೆಯ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಭದ್ರತಾ ಪಡೆ ಟ್ರಂಪ್ ಮನೆಯನ್ನು ಸುತ್ತುವರಿದಿದ್ದು, ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ದಾಳಿಗೆ ಪ್ರತಿಕ್ರಿಯಿಸಿರುವ ಟ್ರಂಪ್, ದೇಶದಲ್ಲಿ ಕರಾಳ ಸಮಯವೊಂದು ನಡೆಯುತ್ತಿದೆ ಎಂದಿದ್ದಾರೆ. ಇನ್ನು ಈ ದಾಳಿಯ ಬಗ್ಗೆ ವಿವರ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!