ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ದಿನಗಳ ಹಿಂದೆ ಉತ್ತರ ಚಿಲಿಯ ಟೈಯೆರ ಅಮರಿಲ್ಲದ ಕಮ್ಯೂನ್ನಲ್ಲಿ ಕಂಡು ಬಂದಿರುವ ನಿಗೂಢ ಬತ್ತುರಂಧ್ರ (ಸಿಂಕ್ಹೋಲ್) ಪ್ರಸಿದ್ಧ ಸ್ಮಾರಕಗಳನ್ನೇ ನುಂಗುವಷ್ಟು ದೊಡ್ಡದಾಗಿದ್ದು, ಈ ಬಗ್ಗೆ ವಿಜ್ಞಾನಿಗಳು ಸಂಶೋಧನೆಗಳನ್ನು ಕೈಗೊಂಡಿದ್ದಾರೆ.
ಮೊದಲಿಗೆ ಸಣ್ಣದಾಗಿದ್ದ ರಂಧ್ರ ದಿನದಿಂದ ದಿನಕ್ಕೆ ಗಾತ್ರದಲ್ಲಿ ದೊಡ್ಡದಾಗುತ್ತಿದ್ದು, ಆಳವೂ ವಿಸ್ತಾರವಾಗುತ್ತಿದೆ ಎಂದು ಸಂಶೋಧನೆ ಕೈಗೊಂಡಿರುವ ಭೂವಿಜ್ಞಾನ ಮತ್ತು ಗಣಿಗಾರಿಕೆಯ ರಾಷ್ಟ್ರೀಯ ಸೇವಾ ಸಂಸ್ಥೆ ತಿಳಿಸಿದೆ. ಅಲ್ಲದೆ, ರಂಧ್ರದ ಗಾತ್ರ ದ್ವಿಗುಣಗೊಂಡಿದ್ದು, ಫ್ರಾನ್ಸ್ನ ಆರ್ಕ್ ಡಿ ಟ್ರಿಯಂಫ್ನ್ನು ನುಂಗುವಷ್ಟು ದೊಡ್ಡದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.